ಚೀನಾದಿಂದ ಪಾಕಿಸ್ತಾನಕ್ಕೆ ಮತ್ತೆ 20 ಲಕ್ಷ ಡೋಸ್ ಲಸಿಕೆ
ತನ್ನಅಪ್ಪಟ ಮಿತ್ರ ದೇಶ ಕೊರೊನಾ ಮಾಹಾಮಾರಿಯ ತವರುಮನೆ ಚೀನಾದಿಂದ ಪಾಕಿಸ್ತಾನ ಹೆಚ್ಚುವರಿಯಾಗಿ 20 ಲಕ್ಷ ಕೋವಿಡ್ ಲಸಿಕೆಯನ್ನು ಪಡೆದಿದೆ.
ಪಾಕಿಸ್ತಾನದ ಅಂತರರಾಷ್ಟ್ರೀಯ ಏರ್‌ಲೈನ್ (ಪಿಐಎ) ಪಿಕೆ–6852 ವಿಶೇಷ ವಿಮಾನವು ಬೀಜಿಂಗ್ ನಿಂದ 20 ಲಕ್ಷ ಸಿನೋವಾಕ್ ಕೋವಿಡ್ ಲಸಿಕೆಯನ್ನು ಮಂಗಳವಾರ ಏರ್‌ಲಿಫ್ಟ್ ಮಾಡಿದೆ.
ಪಾಕಿಸ್ತಾನವು ಭಾನುವಾರವಷ್ಟೇ ಚೀನಾದಿಂದ 15.5 ಲಕ್ಷ ಸಿನೋವಾಕ್ ಲಸಿಕೆಯನ್ನು ಪಡೆದಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ 20 ಲಕ್ಷ ಲಸಿಕೆಯು ಚೀನಾದಿಂದ ಬಂದಿದೆ.
ಆದ್ರೆ ಚೀನಾದ ಲಸಿಕೆಯ ಮೇಲೆ ಇನ್ನೂವರೆಗೂ ಬಹುತೇಕ ಯಾವ ದೇಶಗಳಿಗೂ ನಂಬಿಕೆಯಿಲ್ಲ.. ಅದ್ರಲ್ಲೂ ಚೀನೀಯ ಲಸಿಕೆ ಪಡೆದವರಿಗೆ ತಮ್ಮ ದೇಶದ ಪ್ರವೇಶವನ್ನ ಸೌದಿ ಅರೇಬಿಯಾ ನಿರ್ಬಂಧಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








