ಪಾಕಿಸ್ತಾನದಲ್ಲಿ ಬಸ್‌ ದುರಂತ – ‘ಮಿತ್ರ’ನ ಮೇಲೆಯೇ ನಂಬಿಕೆ ಇಲ್ಲದೇ ತನಿಖಾ ತಂಡ ಕಳುಹಿಸಿದ ಚೀನಾ..!

1 min read

ಪಾಕಿಸ್ತಾನದಲ್ಲಿ ಬಸ್‌ ದುರಂತ – ‘ಮಿತ್ರ’ನ ಮೇಲೆಯೇ ನಂಬಿಕೆ ಇಲ್ಲದೇ ತನಿಖಾ ತಂಡ ಕಳುಹಿಸಿದ ಚೀನಾ..!

ಪಾಕಿಸ್ತಾನದಲ್ಲಿ ಕಳೆದ ಬುಧವಾರ ಸಂಭವಿಸಿದ ಬಸ್‌ ದುರಂತ ಪ್ರಕರಣ ಸಂಬಂಧ ತನಿಖೆ ನಡೆಸಲು ಪಾಕ್ ಮಿತ್ರ ದೇಶ ಚೀನಾ ವಿಶೇಷ ತಂಡವನ್ನು ಕಳುಹಿಸಿಕೊಟ್ಟಿದೆ. ಭಯೋತ್ಪಾದಕರ ದಾಳಿ ಎಂದು ಪ್ರತಿಪಾದಿಸಿರುವ ಚೀನಾ ಮಿತ್ರ ಎಂದು  ಬಾಯಿ ಬಡೆದುಕೊಳ್ಳುವ , ತನ್ನ ಗುಲಾಮ ದೇಶ  ಪಾಕಿಸ್ತಾನವನ್ನೇ ಅನುಮಾನದಿಂದ ನೋಡ್ತಿದೆ.

ನಿರ್ಮಾಣ ಹಂತದಲ್ಲಿದ್ದ ದಾಸು ಅಣೆಕಟ್ಟು ಇರುವ ಸ್ಥಳಕ್ಕೆ ಚೀನಾದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸ್ಫೋಟಗೊಂಡು ಚೀನಾದ 9 ಪ್ರಜೆಗಳು ಮತ್ತು ಇಬ್ಬರು ಸೈನಿಕರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದರು. ಅಲ್ಲದೆ, 39 ಮಂದಿ ಗಾಯಗೊಂಡಿದ್ದರು. ಸ್ಫೋಟದ ನಂತರ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿತ್ತು.

ಈ ಬಸ್‌ ದುರಂತದಲ್ಲಿ ಚೀನಾದ 9 ಎಂಜಿನಿಯರ್‌ ಗಳೂ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಬಸ್‌ ಸ್ಫೋಟಗೊಂಡು ಸಂಭವಿಸಿದ ಈ ಪ್ರಕರಣವು ಭಯೋತ್ಪಾದಕ ದಾಳಿಯೋ ಅಥವಾ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟವೋ ಎಂಬುದರ ಬಗ್ಗೆ  ಪಾಕ್ ಚೀನಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇನ್ನೂ ಚೀನಾ ಮತ್ತು ಪಾಕಿಸ್ತಾನ ಜೊತೆಯಾಗಿ ಸತ್ಯಾನ್ವೇಷಣೆ ನಡೆಸಲಿವೆ ಎಂದು ಚೀನಾದ ಸಾರ್ವಜನಿಕ ಭದ್ರತಾ ಸಚಿವ ಝಾವೊ ಕೆಝಿ ಪಾಕಿಸ್ತಾನದ ಮಂತ್ರಿ ಜೊತೆ ದೂರವಾಣಿಯಲ್ಲಿ ಚರ್ಚಿಸಿದ ಬಳಿಕ ತಿಳಿಸಿದ್ದಾರೆ.

ಪೆಗಾಸಸ್ ಗೂಢಚರ್ಯೆ ಪ್ರಕರಣ : ಮೋದಿಗೆ ತಿವಿದ ಸುಬ್ರಮಣಿಯನ್

ಪೆಗಾಸಸ್ ವಿಚಾರ | ಅಧಿಕಾರಕ್ಕಾಗಿ ಕೀಳು ಮಟ್ಟಕ್ಕಿಳಿಯುತ್ತಿದೆ ಬಿಜೆಪಿ

ಕೊರೊನಾ ರಿಪೋರ್ಟ್ : ಕಳೆದ 24 ಗಂಟೆಯಲ್ಲಿ 3,998 ಮಂದಿ ಬಲಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd