ಭಾರತದ ವಿರುದ್ಧ ಚೀನಾ ಮಹಾ ಪಿತೂರಿ – ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ..!
ನವದೆಹಲಿ: ಸದಾ ಭಾರತದ ವಿರುದ್ಧ ಕತ್ತಿ ಮಸೆಯುವ ಮಹಾ ಕಪಟಿ ಚೀನಾ ಇದೀಗ ಮಹಾ ಪಿತೂರಿ ನಡೆಸಿದೆ. ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೌದು.. ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆ ತಕ್ಕ ಪಾಠ ಕಲಿಸಿರುವ ಬೆನ್ನಲ್ಲೇ ಗಾಯಗೊಂಡ ‘ನರಿ’ಯಂತಾಗಿರೋ ಚೀನಾ ಇದೀಗ ಭಾರತವನ್ನ ಅಪಾಯಕ್ಕೆ ಸಿಲುಕಿಸಲು ರಣತಂತ್ರ ಹೆಣೆಯುತ್ತಿದೆ.. ಅದರ ಭಾಗವಾಗಿಯೇ ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿಧರಿಸಿದೆ. ತನ್ನ ವಶದಲ್ಲಿರುವ ಟಿಬೆಟ್‍ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‍ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು. ಹೀಗಾಗಿಯೇ ಪೂರ್ವ ಲಡಾಖ್‍ನಲ್ಲಿ ಚೀನಾಯೋಧರು ಹಿನ್ನಡೆ ಅನುಭವಿಸಿದ್ದರು. ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೆಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.