ಚೀನಾದಿಂದ ಜನರಿಗೆ ಅಗತ್ಯ ವಸ್ತು ಸಂಗ್ರಹಕ್ಕೆ ಸೂಚನೆ : ಯುದ್ಧದ ತಯಾರಿಯಲ್ಲಿದ್ಯಾ…?

1 min read

ಚೀನಾದಿಂದ ಜನರಿಗೆ ಅಗತ್ಯ ವಸ್ತು ಸಂಗ್ರಹಕ್ಕೆ ಸೂಚನೆ : ಯುದ್ಧದ ತಯಾರಿಯಲ್ಲಿದ್ಯಾ…?

ಕಪಟಿ ಚೀನಾ  ದ್ವೀಪ ರಾಷ್ಟ್ರ ತೈವಾನ್ ವಿರುದ್ಧ ಯುದ್ಧ ಸಾರುವ ತಯಾರಿ ನಡೆಸಿಕೊಂಡಿದೆ ಎಂಬ ಊಹಾಪೋಹಗಳು ಹರಿದಾಡ್ತಿದ್ದು, ಚೀನಾ – ತೈವಾನ್ ಎರೆಡೂ ದೇಶಗಳ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಚೀನಾ ತನ್ನ ದೇಶದ ಜನರಿಗೆ ದೈನಂದಿನ ಜೀವನ ಮತ್ತು ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಶಿಫಾರಸು ಮಾಡಿದ್ಯಂತೆ.

ಹೀಗಾಗಿ ಅಲ್ಲಿನ ಜನರು ಆತಂಕದಲ್ಲಿ ಅಗತ್ಯವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ ಎಂದು ರಾಷ್ಟ್ರೀಯ ಅಂತರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಚೈನಾ ತೈವಾನ್‌ ನೊಂದಿಗೆ ಯುದ್ಧ ನಡೆಸಲು ಮುಂದಾಗಿದೆಯಾ ಎನ್ನುವ ಪ್ರಶ್ನೆ ಉಧ್ಭವವಾಗಿದೆ. ಆದ್ರೆ ವಿಶ್ಲೇಷಕರ ಪ್ರಕಾರ ಇನ್ನೂವರೆಗೂ ಯುದ್ಧದ ಸನ್ನಿವೇಶ ಎದುರಾಗಿಲ್ಲ ಎನ್ನಲಾಗ್ತಿದೆ. ಆದ್ರೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ ಗಳು ಜನರ ಮನಸ್ಸಿನಲ್ಲಿ ಅಂತಹ ಅಭಿಪ್ರಾಯ ಇರುವುದನ್ನು ಮತ್ತು ಯುದ್ಧೋತ್ಸಾಹದ ಹೇಳಿಕೆಗಳನ್ನು ಹೊರಹಾಕಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಂಧನ ಬೆಲೆಯನ್ನು 50 ರೂ.ಗೆ ಇಳಿಸಬೇಕಾದ್ರೆ ಬಿಜೆಪಿಯನ್ನು ಸೋಲಿಸಬೇಕು : ಸಂಜಯ್ ರಾವತ್

ಅಲ್ಲದೇ ಯುದ್ಧದ ಭಯವೋ ಅಥವಾ ಇಲ್ಲವೋ ಚೀನಾದ ಕೆಲವು ನಗರಗಳಲ್ಲಿ ಅಕ್ಕಿ  ನೂಡಲ್ಸ್ ಮತ್ತು ಅಡುಗೆ ಎಣ್ಣೆಯನ್ನು ಜನರು ಮುಗಿಬಿದ್ದು ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿವೆ. ತೈವಾನ್ 2.4 ಕೋಟಿ ಜನಸಂಖ್ಯೆಯ ಸ್ವ-ಆಡಳಿತ ದ್ವೀಪವಾಗಿದೆ. ಚೀನಾ ಇದನ್ನು ತನ್ನ ಆಳ್ವಿಕೆಯಡಿ ಇರಬೇಕಾದ ಪ್ರಾಂತ್ಯವೆಂದು ಪರಿಗಣಿಸಿದ್ದು, ಇಲ್ಲಿನ ಜನರನ್ನು ದಂಗೆಕೋರರೆಂದು ಭಾವಿಸಿದೆ. ಈ ದ್ವೀಪ ರಾಷ್ಟ್ರದಲ್ಲಿ ಇತ್ತೀಚಿಗೆ ಉದ್ವಿಗ್ನತೆ ತೀವ್ರವಾಗಿ ಏರಿದೆ. ಚೀನಾವು ದ್ವೀಪದ ಸಮೀಪಕ್ಕೆ ಹೆಚ್ಚು ಯುದ್ಧವಿಮಾನಗಳನ್ನು ಕಳುಹಿಸುತ್ತಿದೆ.

ಅಮೆರಿಕ ತೈವಾನ್‌ ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದು, ಅಲ್ಲಿನ ಸರ್ಕಾರದೊಂದಿಗೆ ಗಾಢ ಸಂಬಂಧಗಳನ್ನು ಬೆಸೆಯುತ್ತಿದೆ.ಹೀಗಾಗಿ ಯುದ್ಧದ ಸನ್ನಿವೇಶಗಳು ಗೋಚರಿಸುತ್ತಿವೆ. ಮತ್ತೊಂದು ಕಡೆ ಚೀನಾದಲ್ಲಿ ಅಚಾನಕ್ ಆಗಿ ಏರಿಕೆಯಾಗ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರವು ಮತ್ತೊಮ್ಮೆ ಲಾಕ್ ಡೌನ್ ಹೇರುವ ಸಾಧ್ಯತೆಗಳಿವೆ. ಹೀಗಾಗಿ  ಜನರು ಈ ರೀತಿ ಮುಗಿಬಿದ್ದು ಅಗತ್ಯ ವಸ್ತುಗಳ ಖರೀದಿ ಮಾಡ್ತಿರಬಹುದು ಎಂದೂ ಹೇಳಲಾಗ್ತಿದೆ.

ನಕಲಿ ಮದ್ಯ ಸೇವಿಸಿ 24 ಮಂದಿ ಸಾವು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd