ಚಾಮರಾಜನಗರ : ಕೊರೊನಾಗೆ ಹೆದರಿ ಸಾಮೂಹಿಕ ಆತ್ಮಹತ್ಯೆ Chamarajanagar
ಚಾಮರಾಜನಗರ : ಕೋರೊನಾ ಸೋಂಕು ತಗುಲುವ ಭೀತಿಯಿಂದ ಹೆದರಿ ಇಡೀ ಕುಟುಂಬವೇ ನೇಣಿಗೆ ಶರಣಾದ ಘಟನೆ ಚಾಮರಾಜನಗರ ತಾಲ್ಲೂಕಿನ ಹೆಚ್. ಮೂಕಳ್ಳಿಯಲ್ಲಿ ನಡೆದಿದೆ.
ಹೆಚ್. ಮೂಕಳ್ಳಿ ಗ್ರಾಮದ ಮಹದೇವಪ್ಪ ( 46) ರವರಿಗೆ ಕಳೆದ 20 ದಿನಗಳ ಹಿಂದೆ ಕೋರೊನಾ ಸೋಂಕು ದೃಡವಾಗಿದ್ದು, ಅವರು ಇದೀಗ ಗುಣಮುಖರಾಗಿದ್ದರು.
ಮತ್ತೆ ಕುಟುಂಬದ ಸದಸ್ಯರಿಗೆ ಕೋರೊನಾ ಸೋಂಕು ತಗುಲಿ ಬಿಡುತ್ತೆ ಅಂತ ಹೆದರಿ ಮಂಗಳವಾರ ರಾತ್ರಿ ಮನೆಯಲ್ಲಿ ಪತ್ನಿ ಮಂಗಳಮ್ಮ (36) ಪುತ್ರಿಯರಾದ ಜ್ಯೋತಿ (14) ಹಾಗೂ ಗೀತಾ (12) ಎಂಬವವರೊಂದಿಗೆ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ರಾಮಸಮುದ್ರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಬೇಟಿ ನೀಡಿ , ನೇಣು ಹಾಕಿಕೊಂಡವರನ್ನು ಕೆಳಗಿಸುವ ಕಾರ್ಯದಲ್ಲಿ ತೊಡಗಿದ್ದರು.