3 ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮಿಜಿ ಮೃತದೇಹ ಕಾವೇರಿ ನದಿ ಬಳಿ ಪತ್ತೆ…
ಕಾಣೆಯಾಗಿದ್ದ ಸ್ವಾಮೀಜಿಯೊಬ್ಬರ ಮೃತದೇಹ ಕಾವೇರಿ ನದಿಯ ಸೇತುವೆ ಬಳಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ಪಿಜಿಪಾಳ್ಯ ಗ್ರಾಮದ ಹೊಸಮಠದ ಪೀಠಾದಿಪತಿ ರಾಜಶೇಖರ್ ಬುದ್ದಿ ಮೃತರು ಸ್ವಾಮಿಜಿಗಳು . 70 ವರ್ಷ ವಯಸ್ಸಿನ ಸ್ವಾಮೀಜಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಇವರು ಶುಕ್ರವಾರ ಮುಂಜಾನೆ ಹನೂರು ವಿಧಾನಸಭಾ ಕ್ಷೇತ್ರದ ಸತ್ತೇಗಾಲದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಪಿಜಿ ಪಾಳ್ಯದ ಮಠದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ ನಂತರ ಸುತ್ತೂರು ಜಾತ್ರೆಗೆ ಹೋಗುವುದಾಗಿ ತಿಳಿಸಿದ್ದ ಸ್ವಾಮಿಜಿಗಳು ನಂತರ ಕಾಣೆಯಾಗಿದ್ದರು. ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೂ ಹರಿದಾಡಿತ್ತು. ಸ್ವಾಮೀಜಿ ಸಾವಿಗೆ ಕಾರಣ ನಿಗೂಢವಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Chamarajanagar : missing P.G. Palya Swamiji Rajasekharabuddi was found dead








