ಡ್ರಗ್ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ಬಿನೀಶ್ ವಿರುದ್ಧ ಚಾರ್ಜ್ ಶೀಟ್.!
ಡ್ರಗ್ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ಪ್ರಕರಣ ಸಂಬಂಧ , ಆರೋಪಿಗಳ ಪಾತ್ರದ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಸಂಬಂಧ ಇಡಿ ಸಿಟಿ ಸಿವಿಲ್ ಕೋರ್ಟ್ 34ನೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣದ ನಾಲ್ಕನೇ ಆರೋಪಿಯಾದ ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೀಶ್ ಕೊಡಿಯೇರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 104 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಅನೂಪ್ ನನ್ನ ಬಿನೇಶ್ ಬೇನಾಮಿಯಾಗಿ ಬಳಕೆ ಮಾಡಿಕೊಂಡಿದ್ದ. ಅನೂಪ್ ಹೆಸರಲ್ಲಿ ಬೆಂಗಳೂರು, ಕೇರಳದಲ್ಲಿ ಹೊಟೇಲ್ ತೆರೆದಿದ್ದ. ಅನೂಪ್ ಡ್ರಗ್ ವ್ಯವಹಾರಕ್ಕೆ ಬಿನೇಶ್ ಹಣದ ಸಫ್ಲೈ ಮಾಡಿದ್ದ. ಕೊಕೇನ್ ಡ್ರಗ್ ಸೇವನೆ ಮಾಡಲು ಬ್ಲಾಕ್ ಮನಿ ಬಳಕೆ ಮಾಡಲಾಗಿತ್ತು. ಕೇರಳ ಸರ್ಕಾರದ ಅನೇಕ ಟೆಂಡರ್ ಯೋಜನೆಗಳಿಗೆ ಕಮಿಷನ್ ಪಡೆಯುತ್ತಿದ್ದ. ಈ ಬಗ್ಗೆ ಇಡಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದೆ. ಈ ವೇಳೆ ಬಿನೇಶ್ ಅಕ್ರಮ ಹಣವನ್ನು ಬೇನಾಮಿಯಾಗಿ ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುಹಾಸ್ ಕೆ ಗೌಡ ಜೊತೆ ಸೇರಿ ಹೌಸ್ ಪಾರ್ಟಿಗೆ ಕೊಕೇನ್ ಬಳಕೆ ಮಾಡಲಾಗಿರೋದು ತಿಳಿದುಬಂದಿದೆ. ಆ ಡ್ರಗ್ ಖರೀದಿ ಮಾಡಲು ಅಕ್ರಮ ಸಂಪಾದನೆಯ ಬಳಕೆ ಮಾಡಿರೋದು ಪತ್ತೆಯಾಗಿದೆ. ಮೊಹಮ್ಮದ್ ಅನೂಪ್ ಅಕೌಂಟ್ ಗೆ ಅನ್ ಅಕೌಂಟ್ ಹಣದ ವರ್ಗಾವಣೆ ಮಾಡಲಾಗಿದ್ದು, ಅಕ್ರಮ ಹಣದ ಮೂಲ ಪತ್ತೆ ಮಾಡಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಸದ್ಯ ಈ ಸಂಬಂಧ ಅನಿಕಾ ಡಿ, ರಿಜೇಶ್ ರವಿಚಂದ್ರನ್, ಮೊಹಮ್ಮದ್ ಅನೂಪ್ ಮತ್ತು ಬಿನೀಶ್ ಕೊಡಿಯೇರಿ ವಿರುದ್ಧ NCB ಚಾರ್ಜ್ ಶೀಟ್ ಸಲ್ಲಿಸಿದೆ.
ಬಿಬಿಎಂಪಿ ಚುನಾವಣೆ : ವಿಚಾರಣೆ ಮಾರ್ಚ್ 17ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್.!
ರಾಬರ್ಟ್ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ‘ಕೌರವ’..!
ಧಾರ್ಮಿಕ ಸ್ಥಳಗಳಲ್ಲಿ ‘ಶಬ್ದಮಾಲಿನ್ಯ’ ತಡೆಗೆ ರಾಜ್ಯ ಹೈಕೋರ್ಟ್ ಆದೇಶ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel