ಧಾರ್ಮಿಕ ಸ್ಥಳಗಳಲ್ಲಿ ‘ಶಬ್ದಮಾಲಿನ್ಯ’ ತಡೆಗೆ ರಾಜ್ಯ ಹೈಕೋರ್ಟ್ ಆದೇಶ
ಬೆಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ಶಬ್ದಮಾಲಿನ್ಯ ತಡೆಯಲು ಸೂಕ್ತ ಮಾರ್ಗಸೂಚಿ, ನಿರ್ದೇಶನಗಳನ್ನು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಹೊರಡಿಸಿದೆ. ಧಾರ್ಮಿಕ ಸ್ಥಳಗಳಲ್ಲಿ ಶಬ್ದಮಾಲಿನ್ಯ ತಡೆಯಲು ಸರ್ಕಾರದಿಂದ ಯಾವುದೇ ನಿರ್ದೇಶನಗಳಿಲ್ಲ, ಅಕ್ರಮವಾಗಿ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ನಿಯಂತ್ರಣ ಅಗತ್ಯ ಎಂದು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ತೀರ್ಪು ನೀಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ಬಳಿಕ ಧಾರ್ಮಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯ ತಡೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಲಿ, ಇದು ರಾಜ್ಯದೆಲ್ಲೆಡೆ ಅನ್ವಯವಾಗಲಿ ಎಂದು ಅಭಿಪ್ರಾಯಪಟ್ಟಿದೆ.
UP ಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮನವಿ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್..!
ಅಂದ್ಹಾಗೆ ಧಾರ್ಮಿಕ ಸ್ಥಳಗಳಲ್ಲಿ ಆಂಪ್ಲಿಫೈಯರ್ ಗಳು ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸಲಾಗುತ್ತಿದೆ. 2000ರ ಶಬ್ದ ಮಾಲಿನ್ಯ ನಿಯಮಗಳ ಉಲ್ಲಂಘನೆಯಾಗಿದೆ. ಲೌಡ್ ಸ್ಪೀಕರ್ಗಳು ಅಥವಾ ಸಾರ್ವಜನಿಕ ಭಾಷಣಗಳ ಸದ್ದು ಕಾನೂನಿನ ಪ್ರಕಾರ ಪ್ರದೇಶವೊಂದರಲ್ಲಿ 10 ಡಿಬಿ (ಎ) ಸಾಮಾನ್ಯ ಮಾನದಂಡದ ಶಬ್ಧ ಮಟ್ಟ ಮೀರಬಾರದು ಎಂಬ ನಿಯಮ ಜಾರಿಯಾಗಬೇಕಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಅಲ್ದೇ ನ್ಯಾಯಾಲಯದ ಆದೇಶವನ್ನು ಸರ್ಕಾರ ಏಕೆ ಪಾಲಿಸಿಲ್ಲ ಎಂದು ವರದಿ ನೀಡುವಂತೆ ಸೂಚಿಸಿ, ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 17 ಕ್ಕೆ ಮುಂದೂಡಿದೆ.
ಚೀನಾ ಅಧ್ಯಕ್ಷ ‘ಜಿನ್ ಪಿಂಗ್’ ದೇಹದಲ್ಲಿ ‘ಪ್ರಜಾಸತ್ತಾತ್ಮಕ ಎಲುಬಿಲ್ಲ’: ಜೋ ಬೈಡನ್..!
ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ : ಗುಲಾಂ ನಬಿ ಆಜಾದ್
ಬದುಕುವ ಭರವಸೆ ಕಳೆದುಕೊಂಡಿದ್ದೆವು. ಅಷ್ಟರಲ್ಲಿ ಫೋನ್ ನೆಟ್ವರ್ಕ್ ಭರವಸೆ ಮೂಡಿಸಿತು – ಹಿಮನದಿ ಸ್ಫೋಟದಲ್ಲಿ ಬದುಕುಳಿದವರ ಮಾತುಗಳು
ಕಣ್ಣೀರಾಕುತ್ತಾ ಗುಲಾಂ ನಬಿ ಆಜಾದ್ ಗೆ ಸಲ್ಯೂಟ್ ಮಾಡಿದ ಮೋದಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel