ನ್ಯೂಯಾರ್ಕ್: ಕೊರೊನಾ ವೈರಸ್ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದ ಚೀನಾದ ಮತ್ತೊಂದು ಎಡವಟ್ಟು ಈಗ ಬೆಳಕಿಗೆ ಬಂದಿದೆ. ಹೌದು..! ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ ಹರಡುತ್ತಿದೆ ಎನ್ನುವುದು ತಿಳಿದಿದ್ದರೂ ಚೀನಾ 6 ದಿನಗಳ ಕಾಲ ಈ ವಿಚಾರವನ್ನು ಮುಚ್ಚಿಟ್ಟಿತ್ತು ಎಂಬುದಾಗಿ ಎಎಫ್ ಪಿ ವರದಿ ಮಾಡಿದೆ.
ವುಹಾನ್ ನಲ್ಲಿ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿರುವ ವಿಚಾರ ಜ.14ರಂದೇ ಆರೋಗ್ಯ ಅಧಿಕಾರಿಗಳಿಗೆ ತಿಳಿದಿತ್ತು. ಆದರೆ ಅವರು ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಮಧ್ಯೆ ವುಹಾನ್ ನಲ್ಲಿ ಔತಣಕೂಟವನ್ನು ಆಯೋಜನೆ ಆಗಿತ್ತು. ಈ ಔತಣಕೂಟದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಇದಾದ ಬಳಿಕ ನಡೆದ ಹೊಸ ವರ್ಷವಾದ ಲುನಾರ್ ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ವಿಶ್ವದ ಹಲವು ದೇಶಗಳಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಆಗಮಿಸಿದ್ದರು. ಪರಿಣಾಮ ಜ.21ರ ಒಳಗಡೆ ಸೋಂಕು 3 ಸಾವಿರ ಮಂದಿಗೆ ಹರಡಿತು. ಆದರೆ ಚೀನಾ ಈ ವಿಚಾರವನ್ನು ಮುಚ್ಚಿಟ್ಟ ಪರಿಣಾಮ ಸೋಂಕು ವಿಶ್ವದೆಲ್ಲೆಡೆ ಹರಡಿ ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.








