Chemical Factory
ಬೆಂಗಳೂರು : ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸ ಗುಡ್ಡದಹಳ್ಳಿಯಲ್ಲಿ ನಡೆದಿದೆ. ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೃಹತ್ ಪ್ರಮಾಣದ ಬೆಂಕಿ, ಅಕ್ಕ ಪಕ್ಕದ ಮನೆಗಳಿಗೂ ವ್ಯಾಪಿಸಿದ್ದು, ಬೆಂಕಿಯ ಕೆನ್ನಾಲಿಗೆಯ ತೀವ್ರತೆಗೆ ಸುತ್ತಲೂ ದಟ್ಟ ಹೊಗೆ ಆವರಿಸಿಬಿಟ್ಟಿದೆ. ಇತ್ತ ಕ್ಷಣಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದೆ. ಸುತ್ತಮುತ್ತಲಿನ ನಿವಾಸಿಗಳಲ್ಲಿ ಇದು ಆತಂಕ ಮೂಡಿಸಿದೆ.
ಇನ್ನೂ ಘಟನೆ ವೇಳೆ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಾಲ್ಕು ಜನರಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಳ್ತಾಯಿದ್ದಂತೆ ಎಲ್ಲರೂ ಹೊರಗಡೆ ಓಡಿ ಬಂದಿದ್ದಾರೆ. ಆದರೆ ಅಗ್ನಿ ಅಹುತಿಗೆಯಿಂದ ಕಾರ್ಮಿಕನಿಬ್ಬನಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗ್ತಾಯಿದೆ. ಮೈಯಲ್ಲಾ ಸುಟ್ಟು ಹೋಗಿದ್ದು, ಸದ್ಯ ಕಾರ್ಮಿಕ ನನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಸ್ಯಾನಿಟೈಸರ್ ಹಾಗೂ ಟಿನ್ನರ್ ತಯಾರಿಕಾ ಕಂಪೆನಿ ಇದಾಗಿದ್ದು, ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುಲಾಗುತಿತ್ತು. ಸ್ಥಳದಲ್ಲಿ ಜಮಾಯಿಸಿರುವ ಪೊಲೀಸರು ಅರ್ಧ ಕಿಲೋಮೀಟರ್ ದೂರದಿಂದಲೇ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಇದರ ಹೊರತಾಗಿಯೂ ಅಲ್ಲಲ್ಲಿ ಸುಳಿದಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಇನ್ನೂ ಕೆಮಿಕಲ್ ಫ್ಯಾಕ್ಟರಿ ಕಂಪೌಂಡ್ ಬಿಟ್ಟು 40-60 ಮೀಟರ್ ದೂರದವರೆಗೂ ಬೆಂಕಿ ವ್ಯಾಪಿಸಿದೆ. ಅಷ್ಟೇ ಅಲ್ದೇ ಫ್ಯಾಕ್ಟರಿಯಿಂದ ಹೊರ ಬರುತ್ತಿರುವ ಕೆನ್ನಾಲಿಗೆ, ಕಿಡಿಗಳು ಅಕ್ಕ ಕ್ಕದ ಮನೆಗಳಿಗೂ ಹೊತ್ತಿಕೊಳ್ಳುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಫ್ಯಾಕ್ಟರಿ ಸುತ್ತಮುತ್ತಲಿನ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ.
ಮುನ್ನಚ್ಚರಿಕಾ ಕ್ರಮವಾಗಿ 200 ಮೀಟರ್ ದೂರದ ವರೆಗೆ ಮನೆ ಖಾಲಿ ಮಾಡಿಸಲು ಪೊಲೀಸರು ಸೂಚಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇಡೀ ರಸ್ತೆಯಲ್ಲಾ ಎಲ್ಲಿ ನೋಡಿದ್ರು ಬೆಂಕಿ ಆವರಿಸಿದೆ. ಅಕ್ಕ ಪಕ್ಕ ನಿಲ್ಲಿಸಿದ್ದ ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ಇನ್ನೂ ಫ್ಯಾಕ್ಟರಿಯಲ್ಲಿ ಒಂದು ಸಾವಿರ ಕ್ಯಾನ್ ಗಳಲ್ಲಿ ಕೆಮಿಕಲ್ ತುಂಬಿಡಲಾಗಿತ್ತು. ಕಂಪೆನಿ ಒಳಗಡೆ ಜನರು ಕೆಲಸ ಮಾಡುತ್ತಿದ್ದರು. ನಾಲ್ಕು ಜನ ಹೊರಗಡೆ ಓಡಿ ಬಂದಿದ್ದು, ಇನ್ನೂ ಒಳಗಡೆ ಜನರು ಇದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಅಲ್ಲದೇ ಫ್ಯಾಕ್ಟರಿಯಲ್ಲಿ ನಿರಂತರವಾಗಿ ಸಿಲಿಂಡರ್ ಸ್ಪೋಟಗೊಳ್ಳುತ್ತಿದೆ. ಅಲ್ಲದೇ ಈಗಾಗಲೇ 8 ಅಗ್ನಿ ಶಾಮಕ ವಾಹನಗಳ ಪೈಕಿ ಮೂರು ವಾಹನಗಳ ನೀರು ಖಾಲಿಯಾಗಿದೆ ಎನ್ನಲಾಗಿದೆ. ಫ್ಯಾಕ್ಟರಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಶಿರಾದಲ್ಲಿ ಕೈ – ಕಮಲದ ನಡುವೆ ನೆಕ್ ಟು ನೆಕ್ ಫೈಟ್ : 6ನೇ ಸುತ್ತಿನನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ
Chemical Factory
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel