ಚೆನ್ನೈ ಸೂಪರ್ ಕಿಂಗ್ಸ್ VS ಡೆಲ್ಲಿ ಕ್ಯಾಪಿಟಲ್ಸ್- ಫೈನಲ್ ಟಿಕೆಟ್ ಯಾರಿಗೆ..?
ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡೂ ಪಂದ್ಯಗಳಲ್ಲೂ ಸೋತಿತ್ತು. ಯುವಕರೇ ತುಂಬಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ನ ಅನುಭವ ವರ್ಕೌಟ್ ಆಗಿರಲಿಲ್ಲ.
ಈಗ ಕ್ವಾಲಿಫೈಯರ್-01ರಲ್ಲಿ ಮತ್ತೆ ಈ ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಇಲ್ಲಿ ಗೆದ್ದವರು ನೇರವಾಗಿ ಫೈನಲ್ಗೆ ಎಂಟ್ರಿ ಪಡೆದರೆ, ಸೋತವರು ಎಲಿಮಿನೇಟರ್ನಲ್ಲಿ ಗೆದ್ದ ತಂಡದ ವಿರುದ್ಧ ಕ್ವಾಲಿಫೈಯರ್-02 ಆಡಿ ಗೆದ್ದು ಫೈನಲ್ ಪ್ರವೇಶ ಪಡೆಯಬೇಕಾಗುತ್ತದೆ. ಹೀಗಾಗಿ ಒನ್ ಶಾಟ್ ಶೂಟೌಟ್ಗೆ ಎರಡೂ ತಂಡಗಳು ಸಜ್ಜಾಗಿವೆ.
ಇಡೀ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಥಿರವಾದ ಆಟ ಆಡಿದೆ. 14 ಪಂದ್ಯಗಳಲ್ಲಿ 10ನ್ನು ಗೆದ್ದಿದೆ. 4ನ್ನು ಸೋತಿದೆ. ಮತ್ತೊಂದು ಕಡೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳೆದ 3 ಪಂದ್ಯಗಳಲ್ಲಿ ಸತತವಾಗಿ ಸೋತಿದೆ.
ಲೀಗ್ನಲ್ಲಿ 14 ಪಂದ್ಯಗಳ ಪೈಕಿ 9ನ್ನು ಗೆದ್ದು 5ನ್ನು ಸೋತಿತ್ತು. ಸೋಲು-ಗೆಲುವುಗಳ ಮಧ್ಯೆ ಹೆಚ್ಚು ಅಂತರ ಇಲ್ದೇ ಇದ್ದರೂ ಚೆನ್ನೈ ಸತತವಾಗಿ 3 ಪಂದ್ಯಗಳನ್ನು ಸೋತಿದ್ದು ಆತ್ಮವಿಶ್ವಾಸಕ್ಕೆ ಪೆಟ್ಟುಕೊಟ್ಟಿದೆ.
ಹೀಗಾಗಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಡೆಲ್ಲಿ ಮತ್ತು ಚೆನ್ನೈ ನಡುವಿನ ಕ್ವಾಲಿಫೈಯರ್ ಮ್ಯಾಚ್ನಲ್ಲಿ ಡೆಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ.
ಟೀಮ್ ಕಾಂಬಿನೇಷನ್ ವಿಚಾರದಲ್ಲಿ ಎರಡೂ ತಂಡಗಳಿಗೂ ಹೆಚ್ಚಿನ ಸಮಸ್ಯೆ ಇಲ್ಲ. ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರನ್ ಹೆಟ್ಮಯರ್ ಕ್ಯಾಪಿಟಲ್ಸ್ ಬ್ಯಾಟಿಂಗ್ ಶಕ್ತಿ.
ಆನ್ರಿಚ್ ನೊಕಿಯೆ, ಕಗಿಸೊ ರಬಾಡ, ಆವೇಶ್ ಖಾನ್, ಅಕ್ಸರ್ ಪಟೇಲ್ ಮತ್ತು ಅಶ್ವಿನ್ ಬೌಲಿಂಗ್ ಅಸ್ತ್ರಗಳು. ಆದರೆ ಮಾರ್ಕಸ್ ಸ್ಟೋಯಿನಿಸ್ ಫಿಟ್ ಆದರೆ ಡೆಲ್ಲಿ ಫರ್ಪೆಕ್ಟ್ ಟೀಮ್ ಆಗಿ ಕಾಣಿಸಿಕೊಳ್ಳಲಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೆಚ್ಚು ಚಿಂತೆ ಮಾಡುತ್ತಿಲ್ಲ. ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಬ್ಯಾಟ್ನಿಂದ ಆರಂಭದಲ್ಲೇ ರನ್ ಬಂದರೆ ಎಲ್ಲಾ ಚಿಂತೆ ದೂರ.
ಮೊಯಿನ್ ಅಲಿ, ಅಂಬಟಿ ರಾಯುಡು ಮತ್ತು ಧೋನಿ ಬಲ ಇದ್ದೇ ಇದೆ. ರಾಬಿನ್ ಉತ್ತಪ್ಪ ಮತ್ತು ಸುರೇಶ್ ರೈನಾ ಮಧ್ಯೆ ಯಾರು ಕಣಕ್ಕಿಳಿಯುತ್ತಾರೆ ಅನ್ನುವ ಗೊಂದಲವಿದೆ. ಬ್ರಾವೋ ಮತ್ತು ಜಡೇಜಾ ಆಲ್ರೌಂಡರ್ಗಲು. ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಜೋಶ್ ಹ್ಯಾಜಲ್ವುಡ್ ಫಾಸ್ಟ್ ಬೌಲಿಂಗ್ ಆಪ್ಶನ್ಗಳು.
ಸಂಭಾವ್ಯ XI
ಚೆನ್ನೈ ಸೂಪರ್ ಕಿಂಗ್ಸ್:
1. ರುತುರಾಜ್ ಗಾಯಕ್ವಾಡ್, 2. ಫಾಫ್ ಡು ಪ್ಲೆಸಿಸ್, 3. ರಾಬಿನ್ ಉತ್ತಪ್ಪ/ಸುರೇಶ್ ರೈನಾ, 4. ಮೊಯಿನ್ ಅಲಿ, 5. ಅಂಬಟಿ ರಾಯುಡು, 6. ಎಂ.ಎಸ್.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್ ಬ್ರಾವೋ 9. ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್
ಡೆಲ್ಲಿ ಕ್ಯಾಪಿಟಲ್ಸ್
2. ಪೃಥ್ವಿ ಷಾ, 2. ಶಿಖರ್ ಧವನ್, 3.ಶ್ರೇಯಸ್ ಅಯ್ಯರ್, 4 ರಿಷಭ್ ಪಂತ್, 5.ಮಾರ್ಕಸ್ ಸ್ಟೋಯ್ನಿಸ್/ ಸ್ಟೀವನ್ ಸ್ಮಿತ್, 6. ಶಿಮ್ರಾನ್ ಹೆಟ್ಮಯರ್, 7.ಅಕ್ಸರ್ ಪಟೇಲ್, 8. ಆರ್.ಅಶ್ವಿನ್,9. ಕಗಿಸೋ ರಬಾಡಾ, 10. ಅನ್ರಿಚ್ ನೋರ್ಟ್ಜೆ, 11.ಆವೇಶ್ ಖಾನ್









