Chikkaballapur | ಚಿರತೆ ದಾಳಿಗೆ ಎಂಟು ಕುರಿ, ಮೂರು ಮೇಕೆ ಬಲಿ
ಚಿಕ್ಕಬಳ್ಳಾಪುರ : ಚಿರತೆ ದಾಳಿಗೆ ಎಂಟು ಕುರಿ, ಮೂರು ಮೇಕೆ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾತ್ರಿಯ ವೇಳೆ ಕುರಿಗಳ ದೊಡ್ಡಿಗೆ ಚಿರತೆ ದಾಳಿ ಇಟ್ಟಿದ್ದು, ದಾಳಿಯಲ್ಲಿ 8 ಕುರಿ 3 ಮೇಕೆಗಳ ರಕ್ತ ಕುಡಿದಿದೆ.

ಹನುಮಂತರಾಯಪ್ಪ ಎನ್ನುವವರಿಗೆ ಸೇರಿದ ಕುರಿಗಳು ಬಲಿಯಾಗಿದ್ದು, ಕುರಿಗಾಹಿ ಆತಂಕಗೊಂಡಿದ್ದಾರೆ.
ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.