chikkaballapura ಕೊರೊನಾ ಹೆಚ್ಚಳ : ಸೆಲ್ಫ್ ಲಾಕ್ ಡೌನ್ ಮಾಡಿಕೊಂಡ ಡಿ ಪಾಳ್ಯ ಗ್ರಾಮಸ್ಥರು
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕೊರೊನಾ ಕಾಟ ಮುಂದುವರೆದ ಕಾರಣ ಗೌರಿಬಿದನೂರು ತಾಲೂಕಿನ ಡಿ ಪಾಳ್ಯ ಗ್ರಾಮದಲ್ಲಿ ಈಗಾಗಲೇ ಜನರೇ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ 24 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಗ್ರಾಮಪಂಚಾಯ್ತಿ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸ್ವಯಂ ನಿರ್ಣಯ ಕೈಗೊಂಡ ಗ್ರಾಮಸ್ಥರು ಲಾಕ್ ಡೌನ್ ಮಾಡಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಸಮಯ ನಿಗದಿ ಮಾಡಿಕೊಂಡಿದ್ದಾರೆ.
ಇನ್ನುಳಿದಂತೆ ಅನಗತ್ಯ ಓಡಾಟ, ಗುಂಪು ಸೇರೋದಕ್ಕೆ ಬ್ರೇಕ್ ಹಾಕಲಾಗಿದೆ. ಅನಗತ್ಯವಾಗಿ ಒಡಾಟ ಸೇರಿ ಮಾಸ್ಕ್ ಇಲ್ಲದೆ ಹೊರಬಂದವರಿಗೆ ಗ್ರಾಮಪಂಚಾಯ್ತಿ ಅಧಿಕಾರಿಗಳು ದಂಡ ವಿಧಿಸುವ ಕೆಲಸ ಸಹ ಮಾಡ್ತಿದ್ದಾರೆ.









