Chikkamagaluru | ಲೋಕಾರ್ಪಣೆಗೊಂಡ ವಾರದಲ್ಲಿಯೇ ಸೇತುವೆ ಕುಸಿತ
1 min read
chikkamagaluru-bridge-has-collapsed saaksha tv
Chikkamagaluru | ಲೋಕಾರ್ಪಣೆಗೊಂಡ ವಾರದಲ್ಲಿಯೇ ಸೇತುವೆ ಕುಸಿತ
ಚಿಕ್ಕಮಗಳೂರು : ಲೋಕಾರ್ಪಣೆಗೊಂದ ವಾರದಲ್ಲಿಯೇ ಸೇತುವೆ ಕುಸಿದಿರುವ ಘಟನೆ ಚಿಕ್ಕಮಳೂರಿನ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.
30 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಇದನ್ನ ಕಳೆದ ವಾರ ಲೋಕಾರ್ಪಣೆ ಮಾಡಲಾಗಿತ್ತು.

ಆದ್ರೆ ಇಂದು ಸೇತುವೆ ಮೇಲೆ ಪಿಕಪ್ ವಾಹನ ಹೋಗಿದ್ದಕ್ಕೆ ಸೇತುವೆಯ ಕಾಂಕ್ರಿಟ್ ಗೋಡೆ ಕಳಚಿ ಬಿದ್ದಿದೆ.
ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವಾಹನ ಸಂಪೂರ್ಣ ನಜ್ಜುಗುಜ್ಜಾಗುತ್ತಿತ್ತು.
ವಾಹನ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಲೋಕಾರ್ಪಣೆಗೊಂಡ ಒಂದೇ ವಾರದಲ್ಲಿ ಸೇತುವೆ ಕುಸಿದಿರುವುದಕ್ಕೆ ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.