ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣಾರ್ಭಟ ಮುಂದುವರೆದಿದೆ. ಮಹಾಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮಲೆನಾಡಿನಲ್ಲಿ ಬಿಟ್ಟು ಬಿಡದೆ ಸುರಿತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಇತ್ತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿಗರು ಕಂಗಾಲಾಗಿಹೋಗಿದ್ದಾರೆ.
ವರುಣ ಆರ್ಭಟಕ್ಕೆ ಹಲವು ಕಡೆ ರಸ್ತೆಗಳಿಗೆ ನೀರು ನುಗ್ಗಿ , ಜಲಾವೃತಗೊಮಡು ಸಂಚಾರಕ್ಕೆ ಅಡಚಣೆ ಉಂಟಾದ್ರೆ , ಹಲವೆಡೆ ಗುಡ್ಡ ಕುಸಿತವಾಗು, ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಅನಾಹುತಗಳು ಸಂಭವಿಸಿದ್ರೆ , ಎಷ್ಟೋ ಮನೆಗಳು ಹಾನಿಗೊಳಗಾಗಿವೆ. ಈಗಾಗಲೇ ಮಲೆನಾಡಿನ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಲೆನಾಡಿನ ಬಹುತೇಕ ಗ್ರಾಮಗಳಲ್ಲಿ ನಾಲ್ಕು ದಿನದಿಂದ ವಿದ್ಯುತ್ ವ್ಯತಯ ಉಂಟಾಗಿ ಜನರು ಹೈರಾಣಾಗಿದ್ದಾರೆ. ವರುಣನ ಆರ್ಭಟಕ್ಕೆ ಮಲೆನಾಡಿನ ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.








