chikkanna
ಕಾಮಿಡಿ ಕಿಂಗ್ ಚಿಕ್ಕಣ್ಣ ಸೋಲೋ ಹೀರೋ ಆಗಿ ಸ್ಯಾಂಡಲ್ ಗೆ ವುಡ್ ಗೆ ಎಂಟ್ರಿ ಕೊಡ್ತಿರೋದೇನು ಹೊಸ ವಿಚಾರವಲ್ಲ. ಚಿತ್ರದ ಟೈಟಲ್ ಕೂಡ ಈಗಾಗಲೇ ರಿವೀಲ್ ಆಗಿದ್ದು, ಉಪಾಧ್ಯಕ್ಷ ಎಂಬ ಹೆಸರಿಡಲಾಗಿದೆ. ಇಲ್ಲಿ ಹೊಸ ವಿಚಾರವೆಂದ್ರೆ ಚಿತ್ರತಂಡ ಚಿಕ್ಕಣ್ಣನಿಗೆ ನಾಯಕಿಯ ಹುಡುಕಾಟದಲ್ಲಿದೆ. ಹೊಸ ನಾಯಕಿಯನ್ನ ಚಂದನವನಕ್ಕೆ ಪರಿಚಯಿಸಲಿದೆ ಉಪಾಧ್ಯಕ್ಷ ಟೀಂ. ಇದಕ್ಕಾಗಿ ಈಗಾಗಲೇ ಹೊಸ ಪ್ರತಿಭೆಗಳ ಸರ್ಚಿಂಗ್ ಶುರುಮಾಡಿದೆ ಚಿತ್ರತಂಡ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿರುವ ತಂಡ ಈಗಾಗಲೇ ಕಾಸ್ಟಿಂಗ್ ಕಾಲ್ ಮಾಡಿದ್ದಾರೆ
ನಾಯಕಿಯಾಗಲು ಬಯಸುವವರಿಗೆ ಇದು ಸುವರ್ಣಾವಕಾಶ. ನಾಯಕಿಯಾಗಲು ಆಸಕ್ತಿ ಹೊಂದಿರುವವರು ಇತ್ತೀಚಿನ ತಮ್ಮ ಭಾವಚಿತ್ರ ಮತ್ತು ನಟನೆಯ ವಿಡಿಯೋ ಕ್ಲಿಪ್ ಗಳನ್ನ ಈ ಮೇಲ್ ಮಾಡಬೇಕು. ಈ ಚಿತ್ರಕ್ಕೆ ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಿಸಿದ್ದ ಚಂದ್ರಮೋಹನ್ ಅವರು ಆಕ್ಷನ್ ಕಟ್ ಹೇಳ್ತಾಯಿದ್ದು, ಹೆಬ್ಬುಲಿ , ಮದಗಜ, ರಾ¨ರ್ಟ್ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಉಮಾಪತಿ ಶ್ರೀನಿವಾಸ್ ಬ್ಯಾನರ್ಸ್ ನಲ್ಲಿ ಈ ಚಿತ್ರ ಮೂಡಿಬರಲಿದೆ. ಅಂದ್ಹಾಗೆ ಚಿತ್ರದಲ್ಲಿ ಮ್ಯಾಜಿಕ್ ಮ್ಯೂಸಿಷಿಯನ್ ಅರ್ಜುನ್ ಜನ್ಯ ಅವರ ಸಂಗೀತವಿರಲಿದೆ.
chikkanna
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel