ಚೀನಾ ಉದ್ದೇಶಪೂರ್ವಕವಾಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ – ಅಮೆರಿಕ ಗುಪ್ತಚರ ವರದಿ
ವಾಷಿಂಗ್ಟನ್, ಜೂನ್24: ಲಡಾಖ್ ಗಡಿಯಲ್ಲಿ ಭಾರತ- ಚೀನಾ ಯೋಧರ ನಡುವೆ ಜೂನ್ 15ರಂದು ನಡೆದ ಘರ್ಷಣೆ ಪೂರ್ವಯೋಜಿತ. ಚೀನಾ ಉದ್ದೇಶಪೂರ್ವಕವಾಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ. ಚೀನಾ ಸೇನಾಪಡೆಯ ಜನರಲ್ ಝಾವೋ ಝಾನ್‌ಖಿ ಅವರು ಭಾರತೀಯ ಯೋಧರ ಮೇಲೆ ಎರಗುವಂತೆ ಚೀನಿ ಸೈನಿಕರಿಗೆ ಸೂಚಿಸಿದ್ದರು ಎಂದು ಅಮೆರಿಕ ಗುಪ್ತಚರ ವರದಿ ಹೇಳಿದೆ.
ಜನರಲ್ ಝಾವೋ ಝಾನ್‌ಖಿ ಅವರು ಚೀನಾದ ಪಶ್ಚಿಮ ಕಮಾಂಡ್ ಮುಖ್ಯಸ್ಥರಾಗಿದ್ದಾರೆ. ಜನರಲ್ ಝಾವೋ ಅವರು ಚೀನಾ, ಅಮೆರಿಕ ಮತ್ತು ಭಾರತದ ಎದುರು ದುರ್ಬಲ ಎಂದು ಕಾಣಿಸಿಕೊಳ್ಳಬಾರದು. ಚೀನಾ ದುರ್ಬಲವೆಂದು ಆ ದೇಶಗಳು ಪರಿಗಣಿಸಿದರೆ, ನಮ್ಮ ಮೇಲೆ ಪ್ರಾಬಲ್ಯ ಮೆರೆಯುತ್ತವೆ. ಹೀಗಾಗಿ ಭಾರತಕ್ಕೆ ಪಾಠ ಕಲಿಸಬೇಕು ಎಂಬ ಧೋರಣೆಯನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಚೀನಾದ ಸೈನಿಕರಿಗೆ ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಎಂದು ಸೂಚನೆ ನಡೆಸಿದ್ದಾರೆ. ಜನರಲ್ ಝಾವೋ ಸೂಚಿಸಿದ ಪ್ರಕಾರವೇ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ಮುಷ್ಠಿ ಯುದ್ಧ ನಡೆಸಿದರು ಎಂದು ಗುಪ್ತಚರ ವರದಿ ಮಾಡಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.