ನವದೆಹಲಿ: ಲಡಾಕ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರು ನಡೆಸಿದ ಗುಂಡಿನ ಕಾಳಗದಲ್ಲಿ ಭಾರತದ ಓರ್ವ ಸೇನಾ ಅಧಿಕಾರಿ ಹಾಗೂ ಇಬ್ಬರು ಯೋಧರನ್ನು ಹತ್ಯೆ ಮಾಡಲಾಗಿದೆ.
ಕಳೆದ ಏಪ್ರಿಲ್ ತಿಂಗಳಿಂದ ಲಡಾಕ್ನ ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಚೀನಾ ಸೈನಿಕರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಲ್ಲದೆ, ಭಾರತೀಯ ಯೋಧರ ಮೇಲೆ ಕಿರಿಕ್ ಮಾಡುತ್ತಲೇ ಬಂದಿದ್ದರು. ಭಾರತ-ಚೀನಾ ನಡುವೆ ಮಾತುಕತೆಗಳು ನಡೆದಿರುವ ಬೆನ್ನಲ್ಲೇ ಚೀನಾ ಸೈನಿಕರು ಅಟ್ಟಹಾಸ ಮೆರೆದಿದ್ದಾರೆ.
ಸೋಮವಾರ ರಾತ್ರಿ ಚೀನಾ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಅಧಿಕಾರಿ ಸೇರಿ ಮೂವರು ಹುತಾತ್ಮರಾಗಿದ್ದಾರೆ. ಭಾರತ-ಚೀನಾ ಸೇನಾ ಮುಖ್ಯಸ್ಥರ ಹಂತದ ಮಾತುಕತೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ ಎಂದು ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.








