China Interesting Facts : ಶ್ರೀಮಂತರ ತಪ್ಪಿಗೆ ಮತ್ತೊಬ್ಬರು ಜೈಲ್ ಸೇರೋ ಕಾನೂನು – ಇರೋದು ಚೀನಾದಲ್ಲಿ..!!
ಕೆಲ ದಶಕಗಳ ಹಿಂದೆ ಚೈನಾ ಆರ್ಥಿಕವಾಗಿರಬಹುದು ಅಭಿವೃದ್ಧಿ ವಿಚಾರದಲ್ಲಿಯೇ ಇರಬಹುದು ನಮ್ಮ ಭಾರತ ದೇಶಕ್ಕಿಂತ ತುಂಬಾ ಅಂದ್ರೆ ಬಹಳವೇ ಹಿಂದಿತ್ತು. ಆದ್ರೆ ಇಂದು ನಮ್ಮ ಭಾರತಕ್ಕಿಂತ ಅನೇಕ ಪಟ್ಟು ಮುನ್ನಡೆ ಸಾಧಿಸಿದೆ. ಪ್ರಪಂಚದಲ್ಲಿ ಚೀನಾದ ವಸ್ತುಗಳ ಮಾರಾಟವಾಗದೇ ಇರುವ ಜಾಗವೇ ಇಲ್ಲ.
ಆದ್ರೆ ನಮಗೆಲ್ಲಾ ಗೊತ್ತು ಹೇಳಿ ಕೇಳಿ ಚೈನಾ ಪ್ರಾಡಕ್ಟ್ಸ ಹಣೆ ಬರಹ ಏನು ಅನ್ನೋದು. ಅವರು ತಿನ್ನೋ ಆಹಾರವನ್ನೂ ಸಹ ಡ್ಯೂಪ್ಲಿಕೆಟ್ ಮಾಡೋರು ಇನ್ಯಾವ ವಸ್ತುವನ್ನ ತಾನೆ ಬಿಡ್ತಾರೆ ಅಲ್ವಾ.. ಕಾಪಿ ಟೆಕ್ನಾಲಜಿ, ಡ್ಯೂಪ್ಲಿಕೇಟ್ ಕ್ರಿಯೇಷನ್ ಅಲ್ಲಿ ಚೀನಾಗೆ ಚೀನಾನೇ ಸರಿಸಾಟಿ. ನಿಜ ಹೇಳೋದಾದ್ರೆ ಚೀನಾದಿಂದ ಬಂದಿರುವ ಒಂದೇ ಒಂದು ಕ್ವಾಲಿಟಿ ಪ್ರಾಡಕ್ಟ್ ಯಾವುದು ಗೊತ್ತಾ…. ಅದೇ ಕೊರೊನಾ ವೈರಸ್…
ಹಾಗಾದ್ರೆ ಇಲ್ಲಿ ನಾವ್ ನಿಮಗೆ ಚೈನಾ ದೇಶದ ಕೆಲವೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಗಳನ್ನ ಸಂಪೂರ್ಣ ಚೈನಾದ ಪರಿಚಯವನ್ನ ಸಂಕ್ಷಿಪ್ತವಾಗಿ ತಿಳಿಸಲಿದ್ದೇವೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಚೈನಾ , ಅಲ್ಲಿನ ಸಂಸ್ಕೃತಿ , ಪ್ರವಾಸಿ ತಾಣಗಳು ಇತರೇ ಮಾಹಿತಿಗಳು.
ಚೀನಾದ ಅಧಿಕೃತ ಹೆಸರು – ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ
ಜನಸಂಖ್ಯೆ : ಸುಮಾರು 145 ಕೋಟಿ
ದೊಡ್ಡ ದೊಡ್ಡ ನಗರಗಳಲ್ಲಿ 61 % ಜನಸಂಖ್ಯೆಯಿದ್ರೆ
ಚಿಕ್ಕ ಚಕ್ಕ ಹಳ್ಳಿಗಳಲ್ಲಿ 39 % ಜನರಿದ್ದಾರೆ
ಈ ದೇಶ ಕೇವಲ ಕೇವಲ 1,2,3,4 ದೇಶಗಳ ಜೊತೆಗೆ ಮಾತ್ರ ತನ್ನ ಗಡಿಯನ್ನ ಹಂಚಿಕೊಳ್ಳುವುದಿಲ್ಲ ಬದಲಾಗಿ 14 ದೇಶಗಳ ಜೊತೆಗೆ ತನ್ನ ಗಡಿಯನ್ನ ಈ ದೇಶ ಹಂಚಿಕೊಳ್ಳುತ್ತೆ. ಆದ್ರೂ ಪಾಕಿಸ್ತಾನ ಮತ್ತೆ ನಾರ್ತ್ ಕಕೊರಿಯಾ ಜೊತೆಗೆ ಮಾತ್ರವೇ ಒಳ್ಳೆಯ ಸಂಬಂಧ ಹೊಂದಿದೆ ಚೈನಾ. ಮಿಕ್ಕ ಎಲ್ಲಾ ರಾಷ್ಟ್ರಗಳೊಂದಿಗೂ ಚೈನಾ ಕಿರಿಕ್ ಮಾಡಿಕೊಳ್ತಲೇ ಇದ್ದು, ಎಲ್ಲಾ ದೇಶಗಳು ನರಿ ಚೀನಾಗೆ ವಿರುದ್ಧವಾಗಿರೋದೇ. ಅದಕ್ಕೆ ಕಾರಣ ಚೈನಾದ ನಡವಳಿಕೆ. ಕುತಂತ್ರಿ ಚೀನಾ ಯಾರಿಗೂ ಇಷ್ಟವಾಗದೇ ಇರೋ ರಾಷ್ಟ್ರ. ಪಾಕಿಸ್ತಾನ ಉತ್ತರ ಕೊರಿಯಾ ಹೊರತಾಗಿ.
ಚೈನಾದಲ್ಲಿ ಮತ್ತೊಂದು ವಿಚಿತ್ರ ವಿಚಾರ , ಅದು ಕೇವಲ ಚೈನಾದಲ್ಲೇ. ಅಂದ್ರೆ ಅದು ಶ್ರೀಮಂತರ ತಪ್ಪಿಗೆ ಮತ್ತೊಬ್ಬರು ಜೈಲ್ ಸೇರೋದು.. ಹೌದು ಇಂತಹ ನಿಯಮ ಇರುವ ಒಂದೇ ಒಂದು ರಾಷ್ಟ್ರ ಚೈನಾ.. ಅಂದ್ರೆ ಇಲ್ಲಿ ಶ್ರೀಮಂತರು ಏನಾದ್ರೂ ತಪ್ಪು ಮಾಡಿದ್ರೆ ಅವರ ತಪ್ಪಿನ ಶಿಕ್ಷೆಯನ್ನ ಬೇರೆಯವರು ಅನುಭವಿಸಬಹುದು. ಅವರಿಗೆ ದುಡ್ಡು ಕೊಟ್ಟು ತಮ್ಮ ಬದಲಾಗಿ ಅವರು ಶಿಕ್ಷೆ ಅನುಭವಿಸಬಹುದಾದ ಸುವರ್ಣಾವಕಾಶ. ಇಲ್ಲಿದೆ. ಪ್ರಪಂಚದಲ್ಲಿ ಇಂತಹ ವಿಚಿತ್ರ ಇರೋದು ಇದೊಂದೇ ದೇಶದಲ್ಲಿ. ಹೌದು ಇದನ್ನ ಕೇಳ್ತಿದ್ರೇನೆ ನಗು ಬರುತ್ತೆ. ಆದ್ರೆ ಇದು ನಿಜ. ಅಂದ್ರೆ ಚೀನಾದಲ್ಲಿ ದುಡ್ ಇದ್ರೆ. ದುನಿಯಾ. ದುಡ್ಡೊಂದಿದ್ರೆ ಏನ್ ಬೇಕಾದ್ರೂ ಮಾಡಬಹುದು. ಆದ್ರೆ ಚೀನಾದಲ್ಲಿ ಮಾತ್ರ. ಯಾಕಂದ್ರೆ ಚೀನಾ ಇದು. ಇಲ್ಲಿ ಏನ್ ಬೇಕಾದ್ರೂ ಆಗುತ್ತೆ.
ಇನ್ನೂ ಈ ವಿಚಾರ ನಿಮಗೆ ಶಾಕ್ ಆಗಬಹುದು. ಅಸಹ್ಯ ಅನ್ನಿಸಲೂ ಬಹುದು. ಆದ್ರೆ 100% ನಿಜ. ಚೀನಾದಲ್ಲಿ ಬಹುತೇಕ ಜನರು ತಮ್ಮ ಯೂರೀನ್ ಅನ್ನ ಸೇವನೆ ಮಾಡ್ತಾರಂತೆ. ಎಸ್ ನಂಬಲಸಾಧ್ಯವೇ ಆದ್ರೂ ನಂಬ್ಲೇ ಬೇಕು. ಬಹುತೇಕ ಜನರು ಮುಂಜಾನೆ ಎದ್ದು ತಮ್ಮ ಯೂರೀನ್ ಸೇವನೆ ಮಾಡ್ತಾರಂತೆ. ಹೇಗೆ ಮಾಡಿದ್ರೆ ಯಾವುದೇ ಕಾಯಿಲೆಯನ್ನೂ ಬೇಕಾದ್ರೂ ತಮ್ಮ ದೇಹದಿಂದ ತೆಗೆದುಹಾಕಬಹುದು ಎನ್ನುವುದು ಅವರ ನಂಬಿಕೆಯಂತೆ. ಆದ್ರೂ ಇಡೀ ವಿಶ್ವಕ್ಕೆ ಕರೊನಾ ಹಬ್ಬಿದ್ದು ಚೀನಾದಿಂದಲೇ ಅನ್ನೋದನ್ನ ಮರೆಯೋಕಾಗಲ್ಲಾ ಅಲ್ವಾ… ಚೀನಾ ಸ್ವಾಮಿ ಇಲ್ಲಿ ಏನ್ ಬೇಕಾದ್ರೂ ನಡೆಯುತ್ತೆ. ಇಲ್ಲಿ ಎಲ್ಲಾ ಸಾದ್ಯವಿದೆ.
ನಿಮಗೆ ಮತ್ತೊಂದು ಆಶ್ಚರ್ಯಕರ ವಿಚಾರ ಹೇಳ್ತೇವೆ ನೋಡಿ.
ಅಮೆರಿಕಾ ದೇಶದ ಅಧಿಕೃತ ಭಾಷೆ ಇಂಗ್ಲಿಷ್ ಅನ್ನೋದು ಎಲ್ರಿಗೂ ಗೊತ್ತಿರದೇ ಇರುವ ವಿಚಾರವೇನಲ್ಲ. ಆದ್ರೆ…. ಅಮೆರಿಕಾಗಿಂತಲೂ ಹೆಚ್ಚಿನ ಇಂಗ್ಲಿಷ್ ಭಾಷೆ ಮಾತನಾಡುವ ಜನ ಸಿಗೋದು ನಿಮಗೆ ಚೈನಾದಲ್ಲೇ. ಎಸ್ 100 % ನಿಜ. ಚೈನಾದ ಪಾಪ್ಯುಲೇಶನ್ ಅಷ್ಟು ದೊಡ್ಡದಿದೆ. ಇಲ್ಲಿನ ಜನಸಂಖ್ಯೆ ಎಷ್ಟರ ಮಟ್ಟಿಗಿದೆ ನೋಡಿ. ಇಷ್ಟು ಜನಸಂಖ್ಯೆ ಹೊಂದಿರುವ ಚೈನಾ ಅಮೆರಿಕಾವನ್ನೇ ಈ ವಿಚಾರದಲ್ಲಿ ಹಿಂದಿಟ್ಟಿದೆ.
ಚೈನಾದಲ್ಲಿ ಬಿಳಿ ಬಣ್ಣ ಅಂದ್ರೆ ಬೆಳ್ಳಗಿರುವ ಜನರಿಗೆ ತುಂಬಾನೆ ಮಹತ್ವ ಕೊಡ್ತಾರೆ. ಹೌದು.. ಇಲ್ಲಿ ಸ್ಕಿನ್ ಟ್ಯಾನ್ ಆದ್ರೆ ಕಪ್ಪಾದ್ರೆ ಅವಮಾನ ಎನ್ನುವ ರೀತಿಯಲ್ಲಿ ಜನರು ತಮ್ಮ ಮನಸ್ಥಿತಿಯನ್ನ ಬೆಳೆಸಿಕೊಮಡಿದ್ದಾರೆ. ಅಷ್ಟೇ ಅಲ್ಲ ಬೆಳ್ಳಗಿರುವವರು ಶ್ರೀಮಂತರು, ಟ್ಯಾನ್ ಆದವರು ಬಡರವರ್ಗದವರೆಂದೇ ಇಲ್ಲಿನ ಜನರು ವಿಂಗಡಿಸಿಕೊಂಡಿದ್ದಾರೆ. ಅದೇ ರೀತಿ ಗುರುತಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ.
ಚೈನಾ.. ಈ ದೇಶದಲ್ಲಿ ಎಲ್ಲವೂ ಸಿಗುತ್ತೆ. ಇನ್ ಫ್ಯಾಕ್ಟ್ ಇಲ್ಲಿ ಸಿಗದೇ ಇರೋ ವಸ್ತು ಅಥವ ಸೇವೆಗಳು ಯಾವುದೂ ಇಲ್ವೇ ಇಲ್ಲಾ ಅನ್ನಬಹುದು. ಆದ್ರೆ ಚೈನಾದಲ್ಲಿ ನಿಮಗೆ ಗರ್ಲ್ ಫ್ರೆಂಡ್ ಸಹ ಬಾಡಿಗೆಗೆ ಸಿಗುತ್ತಾರೆ. ಎಸ್ ಎಸ್ ಎಸ್. ಇಲ್ಲಿನ ವೆಬ್ ಸೈಟ್ ನಲ್ಲಿ ಹೋಗಿ ನೀವು ಸೈನ್ ಇನ್ ಆಗಿ ಗರ್ಲ್ ಫ್ರೆಂಡ್ ನ ಪಡೆಯಬಹುದಾಗಿದೆ. 1 ದಿನದಿಂದ 2 ತಿಂಗಳವರೆಗೂ ನೀವು ಗರ್ಲ್ ಫ್ರೆಂಡ್ ಪಡೆಯಬಹುದು. ಅದಕ್ಕೆ ನಿಗದಿಪಡಿಸಿದಷ್ಟು ಹಣ ಪಾವತಿ ಮಾಡಬೇಕಷ್ಟೇ. ಆದ್ರೆ ಈ ಫೇಕ್ ಗರ್ಲ್ ಫ್ರೆಂಡ್ಸ್ ಕೇವಲ ಮಾನಸಿಕವಾಗಿ ಸಂಬಂಧ ಬೆಳೆಸುತ್ತಾರೆ ಹೊರತಾಗಿ ದೈಹಿಕವಾಗಿ ಸಂಪರ್ಕದಲ್ಲಿ ಇರುವುದಿಲ್ಲ.
ಟ್ರಾಫಿಕ್.. ಈ ಸಮಸ್ಯೆ ಯಾವ ದೇಶದಲ್ಲಿರೋದಿಲ್ಲ. ಅದ್ರಲ್ಲೂ ಬಾರತದಲ್ಲಿ ಟ್ರಾಫಿಕ್ ಸಮಸ್ಯೆಯೇ ದೊಡ್ಡ ತಲೆನೋವು. ಆದ್ರೆ ಚೈನಾದಲ್ಲಿ ಹೀಗೇನಾದ್ರೂ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ರೆ ಒಂದು ಖಾಸಗಿ ಕಂಪನಿಗೆ ಫೋನ್ ಕಾಲ್ ಮಾಡಿ ನಿಮ್ಮ ಲೊಕೇಶನ್ ಸೆಂಡ್ ಮಾಡಿದ್ರೆ ಸಾಕು ಆ ಕಂಪನಿಯ ಓರ್ವ ವ್ಯಕ್ತಿ ಬಂದು ನಿಮ್ಮನ್ನ ಟ್ರಾಫಿಕ್ ನಿಂದ ಹೊರ ತರಲು ಸಹಾಯ ಮಾಡೋ ಜೊತೆಗೆ ನಿಮ್ಮನ್ನ ನಿಮ್ಮ ಮನೆವರೆಗೂ ಬಿಟ್ಟು ಬರುತ್ತಾರೆ.
ಪಾಂಡ – ಚೀನಾ ಬಿಟ್ರೆ ನಿಮಗೆ ಬೇರೆ ಯಾವ ದೇಶದಲ್ಲೂ ಪಾಂಡ ಕಾಣಲಿಕ್ಕೆ ಸಿಗೋದಿಲ್ಲ. ಪಾಂಡ ಬಗ್ಗೆ ಮಾತನಾಡೋವಾಗ ಅದಕ್ಕೆ ಲಿಂಕ್ ಆಗಿರುವ ಮತ್ತೊಂದು ವಿಚಾರದ ಬಗ್ಗೆಯೂ ತಿಳಿಯೋಣ. ಚೀನಾದಲ್ಲಿ ಪಾಂಡ ಟೀ ಏನ್ ಫೇಮಸ್ ಅಂತೀರಾ… ಪಾಂಡ ಟೀ ಕೇವಲ ಹೆಸರಿಗೆ ಪಾಂಡ ಟೀ ಅನ್ನಲ್ಲಾ.. ಈ ಪಾಂಡ ಟೀ ನ ತಯಾರಿಸೋದು ಪಾಂಡಾದ ಮಲ ಮೂತ್ರದಿಂದ. ಹೌದು ಶಾಕ್ ಆದ್ರೂ ಇದು ಚೀನಾ ಇಲ್ಲಿ ಏನ್ ಬೇಕಾದ್ರೂ ಸಾಧ್ಯ ಅನ್ನೋದನ್ನ ಮರೆಯೋ ಹಾಗಿಲ್ಲ. ಹೀಗೆ ಪಾಂಡ ಟೀ ಕುಡಿದ್ರೆ ಆರೋಗ್ಯ ಚನ್ನಾಗಿರುತ್ತೆ ಅನ್ನೊದು ನಂಬಿಕೆ. ಪಾಂಡಾದ ಮಲ ಮೂತ್ರ ಒಣಗಿಸಿ ಅದರಿಂದ ಟೀ ಪುಡಿ ತಯಾರಿಸುತ್ತಾರೆ.
ಚೈನಾದಲ್ಲಿ ಗೋಸ್ಟ್ ಸಿಟಿ ಬಗ್ಗೆ ಕೇಳಿದ್ದೀರಾ… ಎಸ್ ಡ್ರ್ಯಾಗನ್ ರಾಷ್ಟ್ ದಲ್ಲಿ ಘೋಸ್ಟ್ ಸಿಟಿ… ನೀವೆಲ್ಲಾ ಯೋಚನೆ ಮಾಡ್ಬೋದು. ಅರೆ ಸ್ವಾಮಿ ಇಷ್ಟು ದೊಡ್ಡ ಜನಸಂಖ್ಯೆ ಇರೋ ರಾಷ್ಟ್ರದಲ್ಲಿ ದೆವ್ವಗಳಿಗೆ ಜಾಗ ಆದ್ರೂ ಎಲ್ಲಿದ್ಯಪ್ಪಾ ಅಂತ ಅನ್ಸುತ್ತೆ. ಆದ್ರೆ ಇಲ್ಲಿ ಸುಮಾರು 64 ಮಿಲಿಯನ್ ಫ್ಲಾಟ್ ಗಳು ಈವರೆಗೂ ಖಾಲಿ ಬಿದ್ದಿವೆ. ಚೈನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಫ್ಲಾಟ್ ಗಳೇನೋ ನಿರ್ಮಾಣವಾಗಿವೇ. ಆದ್ರೆ ಅಲ್ಲಿ ಇರೋದಕ್ಕೆ ಯಾರೂ ಇಲ್ಲ. ಫೋರೆನ್ಸಿಕ್ ಏಷ್ಯಾ ಲಿಮಿಟೆಡ್ ವರದಿಯ ಪ್ರಕಾರ ಸಂಶೋಧನೆಯಿಂದ ಸಿಕ್ಕಿರುವ ಮಾಹಿತಿಯ ಅನ್ವಯ ಚೀನಾದಲ್ಲಿ ಪ್ರತಿ ವರ್ಷ ಕನಿಷ್ಠ 20 ಸಿಟಿಗಳೇ ಸೃಷ್ಟಿಯಾಗುತ್ತೆ. ಆದ್ರೆ ಅಲ್ಲಿ ಯಾವ ಜನರೂ ಇರೋದಿಲ್ಲ. ಆದ್ರೆ ಈ ಎಲ್ಲಾ ನಗರಗಳು ಫ್ಲಾಟ್ ಗಳು ಖಾಲಿಖಾಲಿಯಾಗಿ ಬಿದ್ದಿರೋದ್ರಿಂದ ಸುತ್ತಲೂ ಸದ್ದಿಲ್ಲದೇ ಗದ್ದಲವಿಲ್ಲದೆ. ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿರುತ್ತೆ. ಹೀಗಾಗಿಯೇ ಬಹುಶಃ ಅಲ್ಲಿನ ಜನರು ಇವುಗಳನ್ನ ಘೋಸ್ಟ್ ಸಿಟಿ ಅಂತ ಕರೆಯುತ್ತಾರೆ ಅನ್ಸುತ್ತೆ.
ಚೀನಾದಲ್ಲಿ ಫ್ಯಾಕ್ಟರಿಗಳ ಬಗ್ಗೆ ಗೊತ್ತೇ ಇದೆ. ಇಡೀ ಜಗತ್ತಿನಲ್ಲೇ ಅಧಿಕ ಫ್ಯಾಕ್ಟರಿಗಳಿರುವ ದೇಶಗಳಲ್ಲಿ ಟಾಪ್ ಸ್ಥಾನದಲ್ಲಿ ಚೀನಾ ಬರುತ್ತೆ. ಹೀಗಾಗಿಯೇ ಅಲ್ಲಿನ ವಾತಾವರಣವೂ ಕಲುಷಿತವಾಗಿದೆ. ಆದ್ರೆ ಚೈನಾದಲ್ಲಿ ಅಲ್ಲ ಚೈನಾ ಒಂದೇ ದೆಶದಲ್ಲಿ ನೀವು ದುಡ್ಡು ಕೊಟ್ಟು ಶುದ್ಧ ಗಾಳಿ ಪಡೆಯಬಹುದಾಗಿದೆ. ಹೌದು. ಮರಗಿಡಗಳನ್ನ ಬೆಳೆಸುವ ಜಾಗದಲ್ಲಿ ಈ ದೇಶವರು ಇದರಿಂದಲೂ ದುಡ್ಡು ಮಾಡುವ ದಾರಿ ಹುಡುಕಿಕೊಂಡಿದ್ದಾರೆ. ಶುದ್ಧ ಗಾಳಿಗಾಗಿ ಏರ್ ಕ್ವಾಲಿಟಿ ಬಾಟಲ್ ಗಳ ಆವಿಷ್ಕಾರ ಮಾಡಿದ್ದಾರೆ. ಸುಮಾರು 2000 ರೂ ಮೌಲ್ಯದ ಈ ಬಾಟಲ್ ಕೊಂಡುಕೊಂಡು ಶುದ್ಧ ಗಾಳಿ ಪಡೆಯಬಹುದು. ಈ ಬಾಟಲ್ ನಲ್ಲಿರುವ ಗಾಳಿ 98 % ಶುದ್ಧವಾಗಿರುತ್ತಂತೆ. ಹೀಗೆ ಒಂದು ಬಾಟಲ್ ನಿಂದ 80 ರಿಂದ 170 ಬಾರಿ ಉಸಿರಾಡಬಹುದು. ಅಂದ್ರೆ ಚೀನಾದಲ್ಲಿ ಶುದ್ಧ ಗಾಳಿ ಬೇಕಂದ್ರೆ ಅದಕ್ಕೂ ನೀವು ದುಡ್ಡು ಬಿಚ್ಚಬೇಕು.
ಚೀನಾದಲ್ಲಿ ಹಕ್ಕಿಗಳ ಗೂಡಿನಿಂದ ತಯಾರಿಸಲಾದ ಸೂಪ್ ಬಹಳವೇ ಫೇಮಸ್. ಎಡಿಬಲ್ ಬರ್ಡ್ ನೆಸ್ಟ್ ಸೂಪ್ ಹೆಸರಿನ ಈ ಡಿಶ್ ಸಿಕ್ಕಾಪಟ್ಟೆ ಕಾಸ್ಟ್ಲಿ ಕೂಡ. ಅಂದ್ರೆ ಕೇವಲ ಈ ಸೂಪ್ ಮಾಡಲು ಬೇಕಾಗುವ ಗೂಡಿನ ಬೆಲೆಗೆ ಕೆಜಿಗೆ 1ಲಕ್ಷದ 30 ಸಾವಿರ ರೂಪಾಯಿ ಇದೆ ಅಂದ್ರೆ ಈ ಸೂಪ್ ಬೆಲೆ ಎಸ್ಟಿರಬಹುದು ನೀವೇ ಲೆಕ್ಕ ಹಾಕಿ.
ಚೈನಾದಲ್ಲಿ ಸುತ್ತಾಡ್ ಬೇಕು ಮೋಜು ಮಸ್ತಿ ಮಾಡ್ಬೇಕು ಅಂತಾ ಅಂದ್ಕೊಂಡಿದ್ರೆ ಇಲ್ಲಿ ಅಂತಹ ಟ್ಯೂರಿಸ್ಟ್ ಜಾಗಗಳಿಗೆ ಕೊರೆತೆಯೇನಿಲ್ಲ.. ಅಂತಹ ನೋಡಲೇಬೇಕಾದ ಪ್ರವಾಸಿತಾಣಗಳ ಬಗ್ಗೆ ತಿಳಿಯಿರಿ
ಜಾಂಗ್ ಜಿಯಾಜಿ ನ್ಯಾಷನಲ್ ಫಾರೆಸ್ಟ್ ಪಾರ್ಕ್ – ಈ ಸ್ಥಳ ಅತ್ಯಂತ ಮನೋಹರ ದೃಶ್ಯದ ಜೊತೆ ರೋಚಕ ಅನುಭವ ನೀಡೋದ್ರಲ್ಲಿ ನೋ ಡೌಟ್. ಇನ್ ಫ್ಯಾಕ್ಟ್ ನಿಮಗೆಲ್ಲಾ ಹಾಲಿವುಡ್ ನ ಸಿನಿಮಾ ಅವತಾರ್ ಗೊತ್ತೇ ಇರಬಹುದು. ಅದ್ರಲ್ಲೂ ಚಿತ್ರದ ಲೊಕೇಶನ್ಸ್ ವಾ ವಾ… ಏನ್ ಸೂಪರಪ್ಪಾ ಅನ್ಸಿರುತ್ತೆ. ಆದ್ರೆ ಈ ಚಿತ್ರದ ನಿರ್ದೇಶಕನಿಗೆ ಇಂತಹದೊಂದು ಐಡಿಯಾ ಹೊಳೆದಿದ್ದೇ ಈ ನ್ಯಾಷನಲ್ ಫಾರೆಸ್ಟ್ ಪಾರ್ಕ್ ಇಂದ ಅಂತೆ. ಎಸ್ ಎಸ್ ಇದೇ ಜಾಗದಿಂದ ಅವತಾರ್ ಸಿನಿಮಾಗೆ ಸ್ಪೂರ್ತಿ ಪಡೆಯಲಾಗಿದ್ಯಂತೆ.