ಬೀಜಿಂಗ್, ಮೇ 16 : ಕೊರೊನಾ ಕಾರಣದಿಂದ ಚೀನಾದ ಮೇಲೆ ಅಮೆರಿಕ ಗರಂ ಆಗಿರುವ ಹಿನ್ನೆಲೆಯಲ್ಲಿ ಅಮೆರಿಕನ್ ಕಂಪೆನಿಗಳು ಚೀನಾ ತೊರೆದು ಏಷ್ಯಾದ ಇತರ ದೇಶಗಳತ್ತ ಮುಖ ಮಾಡಿವೆ. ತನ್ನಲ್ಲಿದ್ದ ಕಂಪೆನಿಗಳು ತಾನು ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದ ದಕ್ಷಿಣ ಏಷ್ಯಾ ರಾಷ್ಟ್ರಗಳತ್ತ ಮುಖ ಮಾಡಿರುವುದು ಚೀನಾಕ್ಕೆ ಜೀರ್ಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹತಾಶೆಗೊಳಗಾಗಿರುವ ಚೀನಾ ಭಾರತವೂ ಸೇರಿದಂತೆ ಏಷ್ಯಾದ ಇತರ ರಾಷ್ಟ್ರಗಳತ್ತ ಅನಗತ್ಯವಾಗಿ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ.
ಇತ್ತೀಚೆಗೆ ಭಾರತದ ಲಡಾಖ್ ಭೂಭಾಗದ ಮೇಲೆ ಯುದ್ಧ ವಿಮಾನಗಳನ್ನು ಹಾರಿಸಿದ ಚೀನಾ, ಸಿಕ್ಕಿಂನ ನಾತು ಲಾ ಪಾಸ್ ಬಳಿಯ ಗಡಿಯಲ್ಲಿ ಭಾರತದ ಸೈನಿಕರ ಜೊತೆ ಸಂಘರ್ಷಕ್ಕೆ ಇಳಿದಿತ್ತು. ಇದೇ ರೀತಿ ಇಂಡೋನೇಷ್ಯಾ, ವಿಯೆಟ್ನಾಂ, ತೈವಾನ್ ಮತ್ತು ಮಲೇಷ್ಯಾ ಜತೆಗೂ ಚೀನಾ, ಅನಗತ್ಯವಾಗಿ ಕ್ಯಾತೆ ತೆಗೆದು ಕಿರಿಕ್ ಸೃಷ್ಟಿಸುತ್ತಿದೆ.
ಚೀನಾದ ಕೋಸ್ಟ್ ಗಾರ್ಡ್, ವಿಯೆಟ್ನಾಂ ನ ಮೀನುಗಾರಿಕಾ ದೋಣಿಯನ್ನು ಹೊಡೆದುರುಳಿಸಿ ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ.
ಇಂಡೋನೇಷ್ಯಾದ ಸುತ್ತ ಕೆಲವು ದಿನಗಳಿಂದ ಚೀನಾದ ಹಡಗುಗಳು ಸುತ್ತಾಡುತ್ತಿದ್ದು, ಚೀನಾದ ಸೈನಿಕರು ಇಂಡೋನೇಷ್ಯಾದ ಮೂವರು ಮೀನುಗಾರರನ್ನು ಸಾಯಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಮುದ್ರದಲ್ಲಿ ನೌಕಾ ಡ್ರಿಲ್ ನಡೆಸಿ ದಕ್ಷಿಣ ಚೀನಾ ಹತ್ತಿರದ ರಾಷ್ಟ್ರಗಳಿಗೆ ಆತಂಕ ಉಂಟುಮಾಡಿದೆ. ಚೀನಾದ ಈ ನಡವಳಿಕೆಗೆ ಅದರ ಹತಾಶ ಮನಸ್ಥಿತಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾತ ತುಳುವೆರೆಗ್ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ
ಮಂಗಳೂರು: ಕರಾವಳಿ ಜನರ ದಶಕಗಳ ಕನಸು ಹಾಗೂ ತುಳುನಾಡಿನ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ರಾಜ್ಯ...








