Chinese App Ban: ಚೀನಾಗೆ ಸೇರಿದ 138 ಬೆಟ್ಟಿಂಗ್ ಮತ್ತು 98 ಲೋನ್ ಅಪ್ಲಿಕೇಶನ್‌ಗಳನ್ನ ನಿಷೇಧಿಸಿದ ಸರ್ಕಾರ…
ಚೀನೀ ಮೊಬೈಲ್ ಅಪ್ಲಿಕೇಶನ್‌ಗಳ ವಿರುದ್ಧದ ಕೇಂದ್ರ ಸರ್ಕಾರ ಮತ್ತೊಮ್ಮೆ ಸಮರ ಸಾರಿದೆ. ಈ ಭಾರಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಲ ನೀಡುವ ಅಪ್ಲಿಕೇಶನ್‌ಗಳು ಸೇರಿದಂತೆ ಹಲವು ಆಪ್ ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಚೀನಾದ ಹಿಡಿತದಲ್ಲಿರುವ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 98 ಸಾಲ ನೀಡುವ ಅಪ್ಲಿಕೇಶನ್‌ಗಳನ್ನ ನಿಷೇಧಿಸುವ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದೆ. ಭಾರತ ಸರ್ಕಾರವು ತನ್ನ ನಾಗರಿಕರ ಡೇಟಾ ಸುರಕ್ಷತೆಯನ್ನ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಈಗಾಗಲೇ ನೂರಾರು ಚೀನೀ ಅಪ್ಲಿಕೇಶನ್‌ಗಳ ಮೇಲೆ ನಿಷೇಧವನ್ನ ಹೇರಿದೆ.
ಗೃಹ ಸಚಿವಾಲಯ ನೀಡಿದ ಸೂಚನೆಗಳ ಮೇರೆಗೆ “ತುರ್ತು” ಆಧಾರದ ಮೇಲೆ ಈ ಚೀನೀ ಅಪ್ಲಿಕೇಶನ್‌ಗಳನ್ನ ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಐಟಿ ಸಚಿವಾಲಯ ತಿಳಿಸಿದೆ. IT ಕಾಯಿದೆಯ ಸೆಕ್ಷನ್ 69 ರ ಪ್ರಕಾರ “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾದ ವಸ್ತು”ವನ್ನ ಒಳಗೊಂಡಿರುವ ಅಪ್ಲಿಕೇಷನ್ ಗಳನ್ನ ನಿಷೇಧಿಸಲಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ, ಹಲವಾರು ಭದ್ರತೆ ಮತ್ತು ಸುರಕ್ಷತಾ ಕಾರಣಗಳನ್ನುಉಲ್ಲೇಖಿಸಿ ಭಾರತ ಸರ್ಕಾರ ದೇಶದಲ್ಲಿ 250 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ” ಎಂದು ಪರಿಗಣಿಸಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Chinese App Ban: The government has banned 138 betting and 98 loan apps belonging to China.








