POKಯಲ್ಲಿ ಚೀನಾ ನಿರ್ಮಿಸಿದ್ದ ಸೇತುವೆ ಕುಸಿತ – ಚೀನಾ ಪಾಕ್ ಸಂಪರ್ಕ ಕಟ್

1 min read

POKಯಲ್ಲಿ ಚೀನಾ ನಿರ್ಮಿಸಿದ್ದ ಸೇತುವೆ ಕುಸಿತ – ಚೀನಾ ಪಾಕ್ ಸಂಪರ್ಕ ಕಟ್

ಭಾರತ ಮತ್ತು ಪಾಕಿಸ್ತಾನ ಭಾಗಳಲ್ಲಿ ಬೇಸಿಗೆಯ ಕಾವು ಹೆಚ್ಚಾಗಿದ್ದು  ಬಿಸಿಗಾಳಿ ಬೀಸುತ್ತಿದೆ. ಈ ಹವಮಾನ ವೈಪರಿತ್ಯದಿಂದಾಗಿ  ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಹುಂಜಾ ಕಣಿವೆಯಲ್ಲಿ ಸರೋವರಕ್ಕೆ ಅಡ್ಡಲಾಗಿ ಚೀನಾ ಕಟ್ಟಿದ್ದ ಸೇತುವೆ ಮುರಿದು ಬಿದ್ದ ಪ್ರಸಂಗ ನಡೆದಿದೆ.

ಬೇಸಿಗೆಗೂ ಸೇತುವೆ  ಮುರಿದುಬೀಳುವುದಕ್ಕೂ ಕಾರಣವೇನು ಎಂದು ನೀವು ಹುಡುತ್ತಿದ್ದರೆ ಈ ಮಾಹಿತಿ ಓದಿ.   AFP ಎಂಬ ಸುದ್ದಿ ಸಂಸ್ಥೆ  ವೀಡಿಯೊ ಒಂದನ್ನ ಟ್ವೀಟ್ ಮಾಡಿದೆ, ಅದರಲ್ಲಿ ಸೇತುವೆ ಬೀಳುವುದನ್ನ ಸ್ಪಷ್ಟವಾಗಿ ಕಾಣಬಹುದು ಜೊತೆಗೆ ಭದ್ರತಾ ಸಿಬ್ಬಂದಿ ಜನರಿಗೆ ಎಚ್ಚರಿಕೆ ನೀಡುವುದನ್ನು ಸಹ ಕಾಣಬಹುದು.

ಈ ಸಂಪೂರ್ಣ ಘಟನೆ ಪಾಕಿಸ್ತಾನದ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ಬಿಸಿಗಾಳಿ ಪರಿಣಾಮ, ಇಲ್ಲಿನ ಶಿಸ್ಪರ್ ಗ್ಲೇಸಿಯರ್ ನ ಮಂಜು ಕರಗಿದ ಕಾರಣ ಸರೋವರದ ನೀರಿನ ಮಟ್ಟ ಹೆಚ್ಚಾಗಿ  ಪ್ರವಾಹ ಉಂಟಾಗಿದೆ, ಸೇತುವ ಮಟ್ಟಕ್ಕೆ ನೀರಿನ ಹರಿವು ಹೆಚ್ಚಾಗಿರುವುದು ಕಣ್ಣಿಗೆ ಕಾಣಸಿಗುತ್ತದೆ.

ಈ ಸೇತುವೆಯನ್ನು ಕಾರಕೋರಂ ಹೆದ್ದಾರಿಯಲ್ಲಿ ಚೀನಾ ನಿರ್ಮಿಸಿದೆ. ಈ ರಸ್ತೆ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್  ಪ್ರದೇಶವನ್ನ ಚೀನಾದೊಂದಿಗೆ ಸಂಪರ್ಕಿಸುತ್ತದೆ. ಇದು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಭಾಗವಾಗಿದೆ. ಸೇತುವೆ ಪತನದ ನಂತರ, ಪಿಒಕೆ ಮತ್ತು ಚೀನಾ ನಡುವಿನ ಸಂಪರ್ಕವು ಕಳೆದುಹೋಗಿದೆ. .

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಹಸನಾಬಾದ್‌ನ ಎರಡು ವಿದ್ಯುತ್ ಸ್ಥಾವರಗಳು ಸಹ ಪ್ರವಾಹದ ನೀರಿನಿಂದ ಕೊಚ್ಚಿಹೋಗಿವೆ. ಅದೇ ಸಮಯದಲ್ಲಿ, ದುರಂತದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.  ಇತ್ತೀಚೆಗಷ್ಟೇ ಪಾಕಿಸ್ತಾನದ ತಾಪಮಾನ 61 ವರ್ಷಗಳ ಹಿಂದಿನ ದಾಖಲೆಯನ್ನ ಹಿಂದಿಕ್ಕಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd