Chiranjeevi : ಚಿರು ಮನೆಯಲ್ಲಿ ವಿಕ್ರಂ ಟೀಂಗೆ ಗ್ರ್ಯಾಂಡ್ ಪಾರ್ಟಿ..!
ಲೋಕನಾಯಕ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಭಾಷೆಗಳ ಎಲ್ಲೆ ಮೀರಿ ಯಶಸ್ಸು ಕಂಡಿದೆ.
ಆಕ್ಷನ್ ಥ್ರಿಲ್ಲರ್ ಆಗಿ ತೆರೆಕಂಡಿರುವ ಈ ಚಿತ್ರವನ್ನು ಲೋಕೇಶ್ ಕನಕರಾಜು ನಿರ್ದೇಶಿಸಿದ್ದಾರೆ.
ಕಳೆದ ಶುಕ್ರವಾರ (ಜೂನ್ 3) ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ರೂ. 200 ಕೋಟಿ ಕ್ಲಬ್ ಸೇರಿದೆ.
ಸೌತ್ ಮಾತ್ರವಲ್ಲ ಬಾಲಿವುಡ್ ನಲ್ಲೂ ವಿಕ್ರಮ್ ಸಿನಿಮಾಗೆ ಕಲೆಕ್ಷನ್ ಗಳ ಸುರಿಮಳೆಯಾಗುತ್ತಿದೆ.

ಏತನ್ಮಧ್ಯೆ, ವಿಕ್ರಂ ಸಿನಿಮಾ ಸಕ್ಸಸ್ ಹಿನ್ನಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಕಮಲ್ ಹಾಸನ್, ನಿರ್ದೇಶನ ಲೋಕೇಶ್ ಕನಕರಾಜ್ ಅವರನ್ನು ಮನೆಗೆ ಕರೆದು ಸನ್ಮಾನಿಸಿದ್ದಾರೆ.
ಬಳಿಕ ಮನೆಯಲ್ಲಿ ಅದ್ಧೂರಿಯಾಗಿ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಗೆ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಕೂಡ ಆಗಮಿಸಿ ವಿಕ್ರಮ್ ಸಿನಿಮಾಗೆ ಶುಭ ಕೋರಿದ್ದಾರೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ ಕಮಲ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಜಿಲ್ ನಟಿಸಿದ್ದಾರೆ.
ತಮಿಳು ಸ್ಟಾರ್ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.