ಪ್ರಮುಖ ಸಿನಿಮಾ ಸುದ್ದಿಗಳು: LATEST UPTDATES ..!

1 min read

“ಒಬ್ಬ ಹಿರಿಯ ನಟನಿಗೆ ಹೀಗೇನಾ ಮರ್ಯಾದೆ ಕೊಡೋದು”…?

‘ಒಬ್ಬ ಹಿರಿಯ ನಟನಿಗೆ ಹೀಗೇನಾ ಮರ್ಯಾದೆ ಕೊಡೋದು…?

ಬೆಂಗಳೂರು : ‘ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ..’ ಇದು 40ಕ್ಕೂ ಹೆಚ್ಚು ವರ್ಷ ಕಲಾಸೇವೆ ಮಾಡುತ್ತಾ ಬಂದಿರುವ ನವರಸನಾಯಕ ಜಗ್ಗೇಶ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತರಾಟೆ ತೆಗೆದುಕೊಂಡ ಪರಿ. ಇದಷ್ಟೆ ಅಲ್ಲಾ, ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ರಾಬರ್ಟ್ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರಿಗೆ ಮಾತನಾಡಲು ಅವಕಾಶ ಕೊಡದೆ ಎಗರಾಡಿದ್ದಾರೆ.

ಏನಿದು ಘಟನೆ..?

ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ ಅನ್ನೋ ಆಡಿಯೋ ಕ್ಲಿಪ್ ವಿವಾದ ಫೆಬ್ರವರಿಯ ಚಳಿ, ಬೆಲೆ ಏರಿಕೆ ಮಧ್ಯೆಯೂ ಭಾರಿ ಸದ್ದು ಮಾಡುತ್ತಿದೆ. ಈ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಮರ ಸಾರಿದ್ದಾರೆ. ಸಿಕ್ಕ ಸಿಕ್ಕ ಕಡೆಯೆಲ್ಲಾ ನವರಸನಾಯಕನ ವಿರುದ್ಧ ಕೆಂಡಕಾರುತ್ತಿದ್ದಾರೆ. ಇಂದು ಇದು ಮತ್ತೊಂದು ಹಂತಕ್ಕೆ ಹೋಗಿದ್ದು, ತೋತಾಪುರಿ ಚಿತ್ರೀಕರಣಕ್ಕೆಂದು ಸದ್ಯ ಮೈಸೂರಿನಲ್ಲಿರುವ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

KGF ಚಾಪ್ಟರ್ 2 ತೆಲುಗಿನ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್

KGF ಚಾಪ್ಟರ್ 2 ತೆಲುಗಿನ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್

ಇಡೀ ಭಾರತೀಯ ಸಿನಿಮಾರಂಗವೇ ಜಾಕತ ಪಕ್ಷಿಯಂತೆ ಕಾದು ಕುಳಿತಿರುವ ಹೈ ಓಲ್ಟೇಜ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ.  ಚಾಪ್ಟರ್ 1 ಸಿನಿಮಾ ರಿಲೀಸ್ ಮಾಡಿದ್ದ ವಿತರಕ ಈ ಸಲ ಹಿಂದೆ ಸರಿದಿದ್ದು,  ತೆಲುಗಿನ ಡಬ್ಬಿಂಗ್ ರೈಟ್ಸ್ ಅನ್ನು  ತೆಲುಗಿನ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಪಡೆದುಕೊಂಡಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೌಸ್ ಹೇಳಿಕೊಂಡಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗು ಭಾಷೆಯಲ್ಲಿ ವರಾಹಿ ಸಂಸ್ಥೆ ಬಿಡುಗಡೆ ಮಾಡಿತ್ತು. ಇದೀಗ, ಚಾಪ್ಟರ್ 2ರಿಂದ ವರಾಹಿ ಸಂಸ್ಥೆ ಹಿಂದೆ ಸರಿದಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ  ತೆಲುಗು ಡಬ್ಬಿಂಗ್ ರೈಟ್ಸ್ ಬರೋಬ್ಬರಿ 65 ಕೋಟಿ ರೂಪಾಯಿಗೆ ಸೇಲ್ ಆಗಿದ್ಯಂತೆ. ಅಂದ್ಹಾಗೆ ಸಿನಿಮಾದ ಡಬ್ಬಿಂಗ್ ರೈಟ್ಸ್ ಗೆ 75 ಕೋಟಿ ರೂಪಾಯಿಗೆ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಕೊನೆಗೆ 65 ಕೋಟಿ ರೂಪಾಯಿಗೆ ಸೇಲ್ ಮಾಡಲು ಮೇಕರ್ಸ್ ಒಪ್ಪಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಕೆಜಿಎಫ್  ಚಾಪ್ಟರ್ 2 ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ  ರಿಲೀಸ್ ಆಗಲಿದೆ. ಜುಲೈ 16 ರಂದು KGF ಚಾಪ್ಟರ್ 2 ವಿಶ್ವಾದ್ಯಂತ ತೆರೆಕಾಣಲಿದೆ. ಈಗಾಗಲೇ ಭಾರಿ ಮೊತ್ತಕ್ಕೆ ಹಿಂದಿ ವಿತರಣೆ ಹಕ್ಕು ಸಹ ಮಾರಾಟ ಆಗಿದೆ.

ಹಿಂದಿಯ ‘ಚೋಟಿ ಬಹು’ ಖ್ಯಾತಿಯ ರುಬಿನಾ ‘ಬಿಗ್ ಬಾಸ್’ ಸೀಸನ್ 14ರ ವಿನ್ನರ್

ಹಿಂದಿಯ ‘ಚೋಟಿ ಬಹು’ ಖ್ಯಾತಿಯ ರುಬಿನಾ ‘ಬಿಗ್ ಬಾಸ್’ ಸೀಸನ್ 14ರ ವಿನ್ನರ್

ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್  ನಡೆಸಿಕೊಟ್ಟ ‘ಬಿಗ್ ಬಾಸ್’ ಹಿಂದಿಯ ಸೀಸನ್ 14 ಮುಕ್ತಾಯವಾಗಿದ್ದು, ಫೈನಲ್ ವಿನ್ನರ್ ಕೂಡ ಅನೌನ್ಸ್ ಆಗಿದೆ. ಹಿಂದಿಯ ಚೋಟಿ ಬಹು ಧಾರವಾಹಿಯಿಂದ ಅತಿ ಹೆಚ್ಚು ಪ್ರಸಿದ್ಧಿ ಪಡೆದು, ಹಲವಾರು ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಅಚ್ಚುಮೆಚ್ಚಿನ ನಟಿಯಾಗಿರುವ ರುಬೀನಾ ದಿಲೈಕ್ ಅವರು ವಿನ್ನರ್ ಆಗಿದ್ದಾರೆ.

ಇದರೊಂದಿಗೆ ರುಬೀನಾ 36 ಲಕ್ಷ ರೂಪಾಯಿ ಬಹುಮಾನ ಹಾಗೂ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಖಿ ಸಾವಂತ್, ನಿಕ್ಕಿ ತಂಬೊಲಿ, ಅಲಿ ಗೊನಿ, ರಾಹುಲ್ ವೈದ್ಯ ಅವರೊಂದಿಗೆ ಫೈನಲ್ ಪ್ರವೇಶಿಸಿದ್ದ ರುಬಿನಾ ಅಂತಿಮವಾಗಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರಾಹುಲ್ ವೈದ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಿಕ್ಕಿ ತಂಬೊಲಿ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿಕೊಡಿ: ಸರ್ಕಾರಕ್ಕೆ ಅನಿರುದ್ಧ್ ಮನವಿ

ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿಕೊಡಿ: ಸರ್ಕಾರಕ್ಕೆ ಅನಿರುದ್ಧ್ ಮನವಿ

ಬೆಂಗಳೂರು: ನಟ ಅನಿರುದ್ಧ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ, ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಅನಿರುದ್ಧ್ ಇದೀಗ ಮಂಗಳಮುಖಿಯರ ಪರ ಧ್ವನಿ ಎತ್ತಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟ, ನಮ್ಮ ಸರ್ಕಾರ, ಸಂಸ್ಥೆ ಹಾಗೂ ಉದ್ಯಮಿಗಳಲ್ಲಿ ಕಳಕಳಿಯ ಮನವಿ. ದಯವಿಟ್ಟು ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಂಗಳಮುಖಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಟ ಅನಿರುದ್ಧ್ ಸರ್ಕಾರ ಮತ್ತು ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ, ಅವಕಾಶ ವಂಚಿತ ಮಂಗಳಮುಖಿಯರಿಗೆ ಜೀವನ ಕಲ್ಪಿಸಿಕೊಡಲು ಅನಿರುದ್ಧ ಮನವಿ ಮಾಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd