Top 5 Cinema News – ಸಿನಿಮಾ ಜಗತ್ತಿನ ದಿನದ ಪ್ರಮುಖ ಸುದ್ದಿಗಳು..!!
KGF 2 : ವಾಲೆಂಟೈನ್ ಡೇಗೆ ಬಿಗ್ ಸರ್ಪ್ರೈಸ್….!!
ಬೆಂಗಳೂರು : ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಗಳಂತೆ ಕಾಯ್ತಿರುವ ಕೆಜಿಎಫ್ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ… ಇದೀಗ ಪ್ರೇಮಿಗಳ ದಿನಾಚರಣೆಗೆ ಕೆಜಿಎಫ್ ಪ್ರೇಮಿಗಳಿಗೆ ದೊಡ್ಡದೊಂದು ಸರ್ಪ್ರೆಸ್ ಕೊಡಲು ಮುಂದಾಗಿದೆ ಕೆಜಿಎಫ್ ತಂಡ.
ಇದೀಗ ಫೆಬ್ರವರಿ 14 ಅಂದ್ರೆ ವಾಲೆಂಟೈನ್ಸ್ ಡೇ ಗೆ ಸಿನಿಮಾದ ಐಟಂ ಹಾಡು ರಿಲೀಸ್ ಆಗಲಿದೆ ಎಂಬುದು ಹೊಸ ಅಪ್ ಡೇಟ್.. ಹೌದು ,, ಕೆಜಿಎಫ್ ಭಾಗ ಒಂದ್ರಲ್ಲಿ ತಮನ್ನಾ ರೆಟ್ರೋ ಸಾಂಗ್ ಜೋಕೆ ಹಾಡಿನ ರೀಮಿಕ್ಸ್ ವರ್ಷನ್ ಗೆ ಸೊಂಟ ಬಳಕಿಸಿದ್ದರು.. ಇದೀಗ ಮತ್ತೊಂದು ರೆಟ್ರೋ ರೀಮಿಕ್ಸ್ ಸಾಂಗ್ ಇರಲಿದೆ ಎನ್ನಲಾಗ್ತಿದೆ. ಅಲ್ಲದೇ ಈ ಐಟಂ ಹಾಡಿಗೆ ಬಾಲಿವುಡ್ ನ ಡ್ಯಾನ್ಸಿಂಗ್ ದೀವಾ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ಹಾಡು ಪ್ರೇಮಿಗಳ ದಿನಕ್ಕೆ ರಿಲೀಸ್ ಆಗಲಿದೆ ಎನ್ನಲಾಗ್ತಿದೆ…
ಹೆಚ್ಚಿನ ಮಾಹಿತಿ : KGF 2 : ಯಶ್ ಬಗ್ಗೆ ರವೀನಾ ತಂಡನ್ ಮಾತು…!!
Bytwo Love : ಸಾಂಗ್ …..
ಸದ್ಯ ಕನ್ನಡದ ಮೂಲಕ ಹಿಟ್ ಆಗಿ ತೆಲಗು ಚಿತ್ರರಂಗಕ್ಕೆ ಪರಿಚಿತವಾಗಿ ಕನ್ನಡ , ತೆಲುಗು ಎರೆಡೂ ಸಿನಿಮಾರಂಗದಲ್ಲೂ ಸಕ್ರಿಯರಾಗಿರುವ ಕ್ಯೂಟ್ ನಟಿ ಶ್ರೀಲಾಲಾ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.. ಇನ್ನೂ ಇತ್ತೀಚಗೆಷ್ಟೇ ಕನ್ನಡದಲ್ಲಿ ಧನ್ವೀರ್ ಹಾಗೂ ಅವರ ನಟನೆಯ ಬೈ ಟು ಲವ್ ಸಿನಿಮಾದ ರೋಮ್ಯಾಂಟಿಕ್ ಟೈಟಲ್ ಸಾಂಗ್ ರಿಲೀಸ್ ಆಗಿದೆ… ಸಾಂಗ್ ಸಖತ್ ಕ್ಯೂಟ್ , ಆಫೀಸ್ ಲವ್ ಸ್ಟೋರಿಯನ್ನ ತೋರಿಸುತ್ತದೆ..ಹಾಡು ಈಗಿನ ಯೂತ್ಸ್ ಗಳಿಗೆ ಬಹಳ ಕನೆಕ್ಟ್ ಆಗ್ತಿದ್ದು , ನೆಟ್ಟಿಗರಂತೂ ಸಾಂಗ್ ನ ಬಹಳ ಮೆಚ್ಚಿಕೊಂಡಿದ್ದಾರೆ,,, ನಿನ್ನೆ ರಿಲೀಸ್ ಆದ ಹಾಡು ಇಂದಿಗೆ 1 ಮಿಲಿಯನ್ ಗಿಂತಲೂ ಅಧಿಕ ವೀವ್ಸ್ ಗಳನ್ನ ಪಡೆದು ಸಾಗ್ತಿದೆ..
Bytwo Love : ಸಾಂಗ್ ….. Bytwo Love : ಆಫೀಸ್ ಲವ್ ಸ್ಟೋರಿ ಬೈ ಟು ಲವ್ – ಕ್ಯೂಟ್ ಸಾಂಗ್ ರಿಲೀಸ್….
ಅದೊಂದು ಸಿನಿಮಾಗೆ ಹೆದರಿದ ‘ಪುಷ್ಪ’
ಪುಷ್ಪ ಸಿನಿಮಾ ಹಾಲಿವುಡ್ ನ ಆ ಒಂದು ಸಿನಿಮಾಗೆ ಹೆದರಿ ರಿಲೀಸ್ ಡೇಟ್ ಪೋಸ್ಟ್ ಮಾಡ್ತಿದೆ ಎನ್ನಲಾಗಿದೆ.. ಇಂತಹದೊಂದು ಸುದ್ದಿ , ಸದ್ಯ ಬಾಲಿವುಡ್ ಅಂಗಳದಲ್ಲಿ ಭಾರೀ ಸೌಂಡ್ ಮಾಡ್ತಿದೆ..
ಹೌದು …. ಅಂದ್ಹಾಗೆ ಆ ಹಾಲಿವುಡ್ ಸಿನಿಮಾ ಮತ್ಯಾವುದೂ ಅಲ್ಲ , ಡೀ ವಿಶ್ವವೇ ಕಾಯುತ್ತಿರುವ ಮೋಸ್ಟ್ ಆಂಟಿಸಿಪೇಟೆಡ್ ಹಿಸ್ಟರಿ ಕ್ರಿಯೇಟರ್ 3D ಸಿನಿಮಾ ಅವತಾರ್ 2…. ಹೌದು ಅವತಾರ್ ಭಾಗ ದು ರಿಲೀಸ್ ಆದ ಬರೋಬ್ಬರಿ 11 ವರ್ಷಗಳ ನಂತರ ಅವತಾರ್ ರಿಲೀಸ್ ಆಗ್ತಿದೆ.. ಇದು ಪುಷ್ಪ ಲಾಕ್ ಮಾಡಿಕೊಂಡಿದ್ದ ಡೇಟ್ ವೇಳೆಯೇ ರಿಲೀಸ್ ಆಗಲಿದೆ..
ಅವತಾರ್ 2ಗೆ ವಿಶ್ವಾದ್ಯಂತ ಅದ್ರಲ್ಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇದೆ.. ಇದು ವಿಶ್ವದ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಈ ಸಿನಿಮಾ 100 % ಅವತಾರ್ ಸಿನಿಮಾ ರಿಲೀಸ್ ಆದಾಗ ರಿಲೀಸ್ ಆಗುವುದಿಲ್ಲ ಎಂದು ಟಾಲಿವುಡ್ ಬಾಲಿವುಡ್ ಅಂಗಳಲ್ಲಿ ಕಬರ್ ಹರಿದಾಡ್ತಿದೆ..
ಹೆಚ್ಚಿನ ಮಾಹಿತಿ : Pushpa 2 : ಅಬ್ಬಾ..!!! ಅದೊಂದು ಸಿನಿಮಾಗೆ ಹೆದರಿದ ‘ಪುಷ್ಪ’… ರಿಲೀಸ್ ಡೇಟ್ ಪೋಸ್ಟ್ ಪೋನ್…!!!
KGF 2 : ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಶ್ರೀನಿಧಿ
ಭಾರತ ಸಿನಿಮಾರಂಗದಲ್ಲಿ ಕ್ರೇಜ್ ಹುಟ್ಟುಹಾಕಿರುವ ಕನ್ನಡದ KGF 2 ಸಿನಿಮಾ ಸದ್ಯ ಏಪ್ರಿಲ್ 14 ಕ್ಕೆ ರಿಲೀಸ್ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.. ಈ ನಡುವೆ ನಾಯಕಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಖುಷಿಯಲ್ಲಿದ್ದಾರೆ.. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.. ಇತ್ತೀಚೆಗೆ ಶ್ರೀನಿಧಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ.. ನಂತರ ಬಗ್ಗೆ Instagram ನಲ್ಲಿ ಮಾಹಿತಿ ಹಂಚಿಕೊಂಡಿರುವ ಶ್ರೀನಿಧಿ ಡಬ್ಬಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ : KGF 2 : ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಹೇಳಿದ್ದೇನು..???
ಬಾಲಿವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ಮದುವೆ
ಹೈದರಾಬಾದ್: ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಗೆಳತಿ ಶಿವಾನಿ ದಾಂಡೇಕರ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ ಎಂದು ಫರ್ಹಾನ್ ತಂದೆ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ. 4 ವರ್ಷಗಳ ಕಾಲ ಜೊತೆಯಾಗಿ ಸುತ್ತಾಡಿದ್ದ ಈ ಜೋಡಿ ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. ಫರ್ಹಾನ್ ಹಾಗೂ ಶಿವಾನಿ ಫೆಬ್ರುವರಿ 21ರಂದು ವಿವಾಹವಾಗಲಿದ್ದಾರೆ. ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ನಾವು ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸುತ್ತಿಲ್ಲ ಎಂದು ಜಾವೇದ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿ : Cinema: ಬಾಲಿವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ಮದುವೆ