ಟಾಪ್ ಸಿನಿಮಾ ಸುದ್ದಿಗಳು..! ಇತ್ತೀಚೆಗಿನ ಅಪ್ ಡೇಟ್ಸ್..!
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಜುಲೈ 16 ಕ್ಕೆ ಬರಲಿದ್ದಾನೆ ರಣಬೇಟೆಗಾರ : ಕೆಜಿಎಫ್ 2 ರಿಲೀಸ್ ಡೇಟ್ ಘೋಷಣೆ..!
ಜುಲೈ 16 ಕ್ಕೆ ಬರಲಿದ್ದಾನೆ ರಣಬೇಟೆಗಾರ. ಕೆಜಿಎಫ್ 2 ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಈ ಮಾಹಿತಿಯನ್ನ ನೀಡಿದ್ದಾರೆ.
ಭಾರತೀಯ ಸಿನಿಮಾರಂಗವೇ ಜಾತಕಪಕ್ಷಿಯಂತೆ ಕಾಯುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆ ದಿನಾಂಕ ರಿವೀಲ್ ಆಗಿದೆ. ಜುಲೈ 16 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.
ಧರ್ಮಸ್ಥಳಿ ಬಾಗಿಲು ಓಪನ್ : ಆಚಾರ್ಯ ಟೀಸರ್ ರಿಲೀಸ್
ಧರ್ಮಸ್ಥಳಿ ಬಾಗಿಲು ಓಪನ್ : ಆಚಾರ್ಯ ಟೀಸರ್ ರಿಲೀಸ್
ಮೆಗಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆಚಾರ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿರುಗೆ ಅಭಿಮಾನಿಗಳು ಮೆಗಾ ವೆಲ್ ಕಮ್ ಕೋರಿದ್ದಾರೆ. ಸದ್ಯ ಆಚಾರ್ಯ ಟೀಸರ್ ಯುಟ್ಯೂಬ್ ನಲ್ಲಿ ಮೆಗಾ ಸುನಾಮಿ ಎಬ್ಬಿಸುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತಾ ಸಾಗುತ್ತಿದೆ.
ಇನ್ನು ಆಚಾರ್ಯ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 152 ನೇ ಚಿತ್ರ. ಕೆಲ ದಿನಗಳ ಹಿಂದಷ್ಟೆ ಜನವರಿ 29 ಸಂಜೆ 04.5ಕ್ಕೆ ಟೀಸರ್ ರಿಲೀಸ್ ಮಾಡೋದಾಗಿ ಚಿತ್ರಯೂನಿಟ್ ಘೋಷಿಸಿತ್ತು. ಅಂದಿನಿಂದ ಅಭಿಮಾನಿಗಳು ಟೀಸರ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಆ ಕಾಯುವಿಕೆಗೆ ತೆರೆ ಬಿದ್ದಿದ್ದು, ಧರ್ಮಸ್ಥಾಳಿ ಬಾಗಿಲುಗಳು ತೆರೆದುಕೊಂಡಿವೆ.
ಫಿಲಂ ಚೇಂಬರ್ ಗೆ ರಾಬರ್ಟ್ ದೂರು: ಪತ್ರದಲ್ಲಿ ಏನಿದೆ..?
ಬೆಂಗಳೂರು : ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಹಿನ್ನೆಲೆ ಇಂದು ನಟ ದರ್ಶನ್ ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದರು.
ರಾಬರ್ಟ್ ತೆಲುಗು ಅವತರಿಣಿಕೆಯನ್ನು ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕ ಉಮಾಪತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ..?
ರಾಬರ್ಟ್ ತೆಲುಗು ಅವಕರಣಿಕೆಯ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕನಾದ ಶ್ರೀ ಉಮಾಪತಿ ಮತ್ತು ನಿರ್ದೇಶಕ ಶ್ರೀ ತರುಣ್ ಇಬ್ಬರು ಸೇರಿ ಏಶಿಯನ್ ಸುನಿಲ್ ಎಂಬುವರ ಬಳಿ ಮಾತುಕತೆ ನಡೆಸಿ ಮಾಚ್ 11 ರಂದು ತೆಲುಗು ಅವತರಣಿಕೆ ಚಿತ್ರವನ್ನು ಬಿಡುಗಡೆ ಮಾಡಲು ದಿನಾಂಕ 20.1.2021 ರಂದು ಸಭೆ ಮಾಡಿ ಮಾತುಕತೆ ನಡೆಸಿದಾಗ ತೆಲಂಗಾಣದಲ್ಲಿ ಏಶಿಯನ್ ಸುನಿಲ್ ಮತ್ತು ಆಂಧ್ರಪ್ರದೇಶದಲ್ಲಿ ಸುರೇಶ್ ಬಾಬು ಪ್ರೊಡಕ್ಷನ್ಸ್ನ ಶ್ರೀ ಜಗದೀಶ್ ಅವರು ಮಾರ್ಚ್ 11 ರಂದು ಚಿತ್ರ ಬಿಡುಗಡೆಗೆ ಒಪ್ಪಿದರು. ತದನಂತರ 3-4 ದಿನಗಳ ನಂತರ ದಿನಾಂಕ 24.1.21ಎಂದು ಶ್ರೀ ಸುನಿಲ್ ಮತ್ತು ಜಗದೀಶ್ ಅವರು ದೂರವಾಣಿಯಲ್ಲಿ ಸಂಪರ್ಕಿಸಿ, ಮಾರ್ಚ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕಾರಣ ಈಗಾಗಲೇ ತೆಲುಗಿನ 4 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಡಬ್ಬಿಂಗ್ ಚಿತ್ರಕ್ಕೆ ಆದ್ಯತೆ ನೀಡಬಾರದೆಂದು ಸ್ಥಳಿಯ ಭಾಷೆಯ ತೆಲುಗು ಚಿತ್ರ ಸಂಸ್ಥೆಗಳಿಂದ ಒತ್ತಡವಿರುವುದಾಗಿ ತಿಳಿಸಿದರು. ಈ ಬಗ್ಗೆ ಶ್ರೀ ಜಗದೀಶ್ ಮತ್ತು ಸುನಿಲ್ ಅವರು ತೆಲುಗು ಪ್ರಾಂತ್ಯದಲ್ಲಿ ರಾಬರ್ಟ್ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರಮಂದಿರ ಕೊಡುವುದಿಲ್ಲವೆಂದು ಅಂಶವು ತಿಳಿದುಬಂತು.
ನಮ್ಮಲ್ಲಿ ಭಾಷಾಭಿಮಾನ ಇಲ್ಲ : ದರ್ಶನ್
ನಮ್ಮಲ್ಲಿ ಭಾಷಾಭಿಮಾನ ಇಲ್ಲ : ದರ್ಶನ್
ನಮ್ಮಲ್ಲಿ ಭಾಷಾಭಿಮಾನ ಇಲ್ಲ, ನಾನು ಓಪನ್ ಆಗಿ ಹೇಳ್ತೀನಿ ಎಂದು ನಟ ದರ್ಶನ್ ಹೇಳಿದ್ದಾರೆ.
ಬೆಂಗಳೂರು : ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಹಿನ್ನೆಲೆ ಇಂದು ನಟ ದರ್ಶನ್ ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಭಾಷಾಭಿಮಾನ ಇಲ್ಲ, ನಾನು ಓಪನ್ ಆಗಿ ಹೇಳ್ತೀನಿ.
ಬೇರೆ ಭಾಷಿಕರಿಗಿರುವ ಭಾಷಾಭಿಮಾನ ನಾವು ಬೆಳಸಿಕೊಳ್ಳಬೇಕು. ನಾವು ಅಲ್ಲಿಗೆ ಹೋದ್ರೆ ನಾವು ಅವರ ಭಾಷೆಯಲ್ಲಿ ಮಾತನಾಡಬೇಕು. ಅವರು ನಮ್ಮ ಭಾಷೆಯಲ್ಲಿ ಮಾತಾಡಲ್ಲ.
ಅವರು ಇಲ್ಲಿ ಬಂದ್ರೆ ಅವರ ಭಾಷೆಯಲ್ಲೇ ನಾವು ಮಾತನಾಡುತ್ತೇವೆ ಎಂದು ಬೇಸರ ಹೊರಹಾಕಿದರು.
ಅಲ್ಲದೆ ನಮ್ಮಲ್ಲಿ ಪರಭಾಷೆ ಬೆಂಬಲಿಸುವ ಕೆಲಸ ನಿಲ್ಲಬೇಕು. ಸಮಸ್ಯೆ ಬಂದಾಗ ನಾವು ನಿರ್ಮಾಕರ ಜೊತೆ ನಿಲ್ಲಬೇಕು ಎಂದು ಕರೆಕೊಟ್ಟರು.
`ನನ್ನ ಕಥೆ ಬಿಡಿ, ಯುವನಟರಿಗೆ ತೊಂದರೆಯಾಗುತ್ತೆ’
ನನ್ನ ಕಥೆ ಬಿಡಿ, ಯುವನಟರಿಗೆ ತೊಂದರೆಯಾಗುತ್ತೆ
ಬೆಂಗಳೂರು : ಟಾಲಿವುಡ್ ನ ನೀತಿಯನ್ನು ವಿರೋಧಿಸಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿಲಂ ಚೇಂಬರ್ ಗೆ ದೂರು ನೀಡಲಿದ್ದಾರೆ.
ಫಿಲಂ ಚೇಂಬರ್ ಗೆ ದೂರು ನೀಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಯಾವುದೇ ತೊಂದರೆ ಇಲ್ಲದೆ ರಿಲೀಸ್ ಆಗುತ್ತಿದೆ.
ಆದ್ರೆ ಆಂಧ್ರದಲ್ಲಿ ನಮ್ಮ ಸಿನಿಮಾಗಳಿಗೆ ತೊಂದರೆಯಾಗುತ್ತೆ. ನನ್ನ ಬಿಡಿ ನಂದು 50 ಸಿನಿಮಾ ಆಯ್ತು.
ಟಾಲಿವುಡ್ ನ ಈ ನಡೆಯಿಂದ ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
‘ಸಲಾರ್’ ಕಾರಣಕ್ಕೆ ‘KGF 2’ ತೆಲುಗು ಡಬ್ಬಿಂಗ್ ರೈಟ್ಸ್ ‘ಡಬಲ್’ ರೇಟ್ ಗೆ ಮಾರಾಟ..!
ಸಲಾರ್’ ಕಾರಣಕ್ಕೆ ‘KGF 2’ ತೆಲುಗು ಡಬ್ಬಿಂಗ್ ರೈಟ್ಸ್ ‘ಡಬಲ್’ ರೇಟ್ ಗೆ ಮಾರಾಟ..!
ಸಲಾರ್ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಕಾಸ್ಟ ಅಂಡ್ ಕ್ರೀವ್ ಇಂದ ಹಿಡಿದು ಟೈಟಲ್ ವರೆಗೂ ಸಖತ್ ಸೌಂಡ್ ಮಾಡ್ತಾಯಿದೆ. ಅದಕ್ಕೆ ಮುಖ್ಯ ಕಾರಣ ಕೆಜಿಎಫ್ ಟೀಮ್, ಪ್ರಶಾಂತ್ ನೀಲ್ ಡೈರೆಕ್ಷನ್ ಬಾಹುಬಲಿ ಪ್ರಭಾಸ್ ಕಾಂಬಿನೇಷನ್. ಆದ್ರೆ ಈ ಬಾರಿ ಸಲಾರ್ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರೋದು ಬೇರೆದ್ದೇ ವಿಚಾರಕ್ಕೆ ಹೌದು ಸಲಾರ್ ಸಿನಿಮಾ ಇಲ್ಲಿ ಸುದ್ದಿಯಾಗ್ತಾಯಿರೋದು ಕೆ ಜಿ ಎಫ್ 2 ವಿಚಾರಕ್ಕೆ.. ಅರೇ ಇದೇನಪ್ಪ.. ಕೆಜಿಎಫ್ 2 ಗೂ ಸಲಾರ್ ಗೂ ಏನ್ ಸಂಬಂಧ ಅಂದ್ರಾ.. ಇದೆರೆಡೂ ಬಹುನಿರೀಕ್ಷಿತ ಬಾರತೀಯ ಸಿನಿಮಾರಂಗದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು. ಎರೆಡರ ಸಿನಿಮಾ ಟೀಂ ಕಾಮನ್. ಡೈರೆಕ್ಟರ್ ಪ್ರಸಾಂತ್ ನೀಲ್ ಅವರದ್ದೇ ಸಾರಥ್ಯ ಎರೆಡೂ ಸಿನಿಮಾಗಳಿಗಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel