Haveri : ಸಿಎಂ ಬಸವರಾಜ ಬೊಮ್ಮಾಯಿ ಅವರು (Basavaraj Bommai) ಅವರು ಹಲವಾರು ಮುಸ್ಲಿಂ ಸಮುದಾಯದವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು.
ಶಿಗ್ಗಾವಿವಿಧಾನಸಭಾ ಕ್ಷೇತ್ರದ ಬಂಕಾಪುರದಲ್ಲಿ ನೂರಾರು ಮುಸಲ್ಮಾನರನ್ನು ಸಿಎಂ ಬೊಮ್ಮಾಯಿ ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ, ನಿಮ್ಮ ಸಂಬಂಧಗಳು ಬಹಳ ಒಳ್ಳೆಯದಾಗಿದೆ. ನಾವೆಲ್ಲರೂ ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ. ಬಂಕಾಪುರದ ಜನರು ನಮ್ಮ ಸಂಬಂಧಗಳಿಗೆ ಬೆಲೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತೇನೆ ಎಂದು ಹೇಳಿದ್ದಾರೆ.
ಪಕ್ಷ ಸೇರ್ಪಡೆಯಾದವರು ಇಲ್ಲಿ ಮಾತ್ರ ಬಿಜೆಪಿಯ (BJP) ಪ್ರಚಾರ ಮಾಡದೇ, ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಬೇಕು. ನಿಮ್ಮ ಅಭಿವೃದ್ಧಿ ಮತ್ತು ಸೇವೆಗೆ ನಾನು ಕಂಕಣ ಬದ್ಧನಾಗಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ಸಮುದಾಯದ ಸಮಗ್ರ ಅಭಿವೃದ್ಧಿಯನ್ನು ಮಾಡೋಣ. ನಾನು ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ಭೇದ ಭಾವ ಮಾಡಿಲ್ಲ ಎಂದು ಭರವಸೆ ನೀಡಿದರು.