Congress | ಕಲ್ಲಿದ್ದಲು ಕೊರತೆ.. ನೀರಿನ ಅಭಾವ.. ಬಿಜೆಪಿ ವಿರುದ್ಧ “ಕೈ” ಕಿಡಿ
ಬೆಂಗಳೂರು : ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ಉಂಟಾಗುವ ಸಾಧ್ಯತೆಗಳಿವೆ,. ಹೀಗಾಗಿ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಇಂಧನ ಸಚಿವರಿಗೆ ಕೋಮು ಬೆಂಕಿ ಹಚ್ಚಲು ಇರುವ ಆಸಕ್ತಿ ಸಮಸ್ಯೆ ಬಗೆಹರಿಸುವುದರಲ್ಲಿಲ್ಲ ಎಂದು ಟೀಕೆ ಮಾಡಿದೆ.
ಕಲ್ಲಿದ್ದಲು ಕೊರತೆ ಬಗ್ಗೆ ಕಾಂಗ್ರೆಸ್ ಟ್ವೀಟ್ ನಲ್ಲಿ.. ಕಲ್ಲಿದ್ದಲು ಕೊರತೆ’ ಈ ಸುದ್ದಿ ಹೊಸದಲ್ಲ, ಹಲವು ತಿಂಗಳ ಹಿಂದೆಯೇ ಸೃಷ್ಟಿಯಾದ ಬಿಕ್ಕಟ್ಟು. ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರವನ್ನ ಒತ್ತಾಯಿಸುವ ಬದಲು ಸುಳ್ಳು ಸಮರ್ಥನೆಯಲ್ಲೇ ಕಾಲ ಕಳೆದಿದ್ದರ ಪರಿಣಾಮ ರಾಜ್ಯ ವಿದ್ಯುತ್ ಕ್ಷಾಮ ಎದುರಿಸುತ್ತಿದೆ. ಇಂಧನ ಸಚಿವರಿಗೆ ಕೋಮು ಬೆಂಕಿ ಹಚ್ಚಲು ಇರುವ ಆಸಕ್ತಿ ಸಮಸ್ಯೆ ಬಗೆಹರಿಸುವುದರಲ್ಲಿಲ್ಲ ಎಂದು ಟ್ವೀಟ್ ಮಾಡಿದೆ.
ಬೇಸಿಗೆ ಹಿನ್ನಲೆಯಲ್ಲಿ ನೀರಿನ ಅಭಾವ ಉಂಟಾಗಿದ್ದು, ದುಬಹಾರಿ ಹಣ ತೆತ್ತು ಜನರು ನೀರು ಖರೀದಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಟ್ವಟ್ಟರ್ ನಲ್ಲಿ.. ಬೆಳೆಯುತ್ತಿರುವ ಬೆಂಗಳೂರಿಗೆ ನೀರಿನ ಅಗತ್ಯತೆ ಹೆಚ್ಚುತ್ತಿರುವುದು ಸರ್ಕಾರ ಗಂಭೀರವಾಗಿ ಪರಿಗಣಿಸದ ಕಾರಣ ಜನತೆ ದುಬಾರಿ ಬೆಲೆ ತೆತ್ತು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.ಇಂತಹ ಸಮಸ್ಯೆಯನ್ನು ಮನಗಂಡು ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯನ್ನು ರೂಪಿಸಿದ್ದು ಹಾಗೂ ಶೀಘ್ರವಾಗಿ ಜಾರಿಗೊಳಿಸಲು ಒತ್ತಾಯಿಸಿದ್ದು.ಸರ್ಕಾರ ಎಚ್ಚರಗುವುದೇ ಎಂದು ಪ್ರಶ್ನಿಸಿದೆ.
ಎಲೆಕ್ಷನ್ ತಯಾರಿಗೆ ಬಿಜೆಪಿ ಮೂರು ತಂಡಗಳನ್ನು ರಚನೆ ಮಾಡಿದ್ದು, ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಟೀಕೆ ಮಾಡಿದೆ. Coal shortage water shortage Congress spark
1ನೇ ತಂಡ ರಚಿಸಿ
PSI ಅಕ್ರಮ ನೇಮಕಾತಿಯ ಖಡಕ್ ತನಿಖೆ ಮಾಡಿಸಿ
2ನೇ ತಂಡ ರಚಿಸಿ
ಪ್ರಕರಣದಲ್ಲಿರೋ ದೊಡ್ಡ ಕುಳಗಳನ್ನೂ ಜೈಲಿಗೆ ಕಳಿಸಿ
3ನೇ ತಂಡ ರಚಿಸಿ
ಸಚಿವರ 40% ಕಮಿಷನ್ ದಂಧೆಯನ್ನ ಸಂಪೂರ್ಣ ನಿಲ್ಲಿಸಿ
-ಮೊದಲು ಇದನ್ನ ಮಾಡಿ- ಆಮೇಲೆ ಟೂರ್ ಮಾಡಿ ಎಂದು ಟೀಕೆ ಮಾಡಿದೆ.