ಸರ್ವರೋಗಕ್ಕೂ ಎಳನೀರು ಮದ್ದು

1 min read
Saakshatv healthtips tender coconut

ಸರ್ವರೋಗಕ್ಕೂ ಎಳನೀರು ಮದ್ದು

ಎಳನೀರು..! ಇದು ಕೇವಲ ಪಾನೀಯವಲ್ಲ. ಹಲವಾರು ಪೋಷಕಾಂಶಗಳನ್ನ ಒಳಗೊಂಡ ಜೀವಾಮೃತ. ಸರ್ವರೋಗಕ್ಕೂ ಮದ್ದು. ಈಗ ಬೇಸಿಗೆ ಕಾಲ ಶುರುವಾಗಿದೆ. ಎಲ್ಲರೂ ಪಾನೀಯಗಳತ್ತ ಮುಖಮಾಡುತ್ತಿದ್ದಾರೆ. ಸಾಕಷ್ಟು ಮಂದಿ ನೈಸರ್ಗಿಕ ಪಾನೀಯವಾಗಿರುವ ಎಳನೀರಿಗಾಗಿ ಹುಡುಕುತ್ತಾರೆ. ವೈದ್ಯರು ಕೂಡ ಎಳನೀರು ಕುಡಿಯುವಂತೆ ಸಲಹೆ ನೀಡುತ್ತಾರೆ.

ಹಾಗಾದ್ರೆ ಎಳನೀರಿನ ಸೇವನೆಯಿಂದ ಯಾವೆಲ್ಲ ಆರೋಗ್ಯಕರವಾದ ಲಾಭಗಳಿವೆ..?

* ಎಳನೀರು ನೈಸರ್ಗಿಕ ಪಾನೀಯವಾಗಿರುವುದರಿಂದ ವಿವಿಧ ಖನಿಜ, ಲವಣದ ಜೊತೆಗೆ ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುತ್ತದೆ. ಇದರ ಸೇವನೆಯಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತೆ. ಹಾಗೇ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
* ಮುಖ್ಯವಾಗಿ ಎಳನೀರು ಕುಡಿಯುವುದರಿಂದ ನಮ್ಮ ದೇಹದೊಳಗಿನ ರಕ್ತ ಹೆಪ್ಪುಗಟ್ಟುವುದಿಲ್ಲ. ಅಲ್ಲದೆ ಕ್ಯಾನ್ಸರ್ ಜನಕ ಕಣಗಳಿಗೆ ವಿರೋಧ ವ್ಯಕ್ತಪಡಿಸುತ್ತದೆ.

coconut-water
* ಸದ್ಯ ಬೇಸಿಗೆ ಶುರುವಾಗಿದೆ. ಬಿಸಿಲಿನಲ್ಲಿ ಓಡಾಡುವುದರಿಂದ ನಮ್ಮ ಚರ್ಮದಲ್ಲಿನ ನೀರಿನಾಂಶ ಕಡಿಮೆ ಆಗುತ್ತದೆ. ಇದು ಅನಾರೋಗ್ಯಕ್ಕೂ ದಾರಿ ಮಾಡಿಕೊಡುತ್ತದೆ. ಇದನ್ನ ತಡೆಯಲು ಎಳನೀರನ್ನು ಹತ್ತಿಯಲ್ಲಿ ಮುಳುಗಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೇವಾಂಶ ಮತ್ತೆ ಪಡೆಯಬಹುದು.
* ಇನ್ನು ಎಳನೀರನ್ನ ಕುಡಿಯುವುದರಿಂದ ಉರಿ ಮೂತ್ರದ ಸಮಸ್ಯೆ ನಿವಾರಣೆ ಆಗುತ್ತದೆ.
* ಆಹಾರ ಸುಲಭವಾಗಿ ಜೀರ್ಣವಾಗಲು ಎಳನೀರು ನೆರವಾಗುತ್ತದೆ.
* ಎಳನೀರಲ್ಲಿ ಪೋಟ್ಯಾಷಿಯಂ ಪ್ರಮಾಣ ಇರೋದ್ರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ಕಡಿಮೆ.
*ಇದಲ್ಲದೇ ಎಳನೀರಿನಿಂದ ಹಲವಾರು ಆರೋಗ್ಯಕರ ಪ್ರಯೋಜನೆಗಳು ಇವೆ. ಇದೇ ಕಾರಣಕ್ಕಾಗಿ ದಿನನಿತ್ಯ ಎಳನೀರು ಕುಡಿಯುವುದು ಉತ್ತಮ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd