ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಇದೇ ನವೆಂಬರ್ 17ರಿಂದ ಆರಂಭವಾಗಲಿದೆ.
ಕಾಲೇಜು ಆರಂಭ ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಪ್ರಾರಂಭ ಮಾಡುವುದಾಗಿ ನಿರ್ಣಯಿಸಲಾಗಿದೆ.
ನವೆಂಬರ್ 17 ರಿಂದ ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜು ಪ್ರಾರಂಭ ಮಾಡವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಪ್ರತಿ ವಿದ್ಯಾರ್ಥಿಗೂ ಉಷ್ಣಾಂಶ ಚೆಕ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಯಿತು.
ಈ ಎಲ್ಲ ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ, ನವೆಂಬರ್ 17ರಂದು ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಆದರೆ ತರಗತಿ ಬರುವುದು ಕಡ್ಡಾಯವಲ್ಲ. ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು.
ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಇನ್ನು ಪ್ರಾಕ್ಟಿಕಲ್ ಕ್ಲಾಸ್ ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಯಾರಿಗೂ ಒತ್ತಾಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಪಾಳಿ ಪ್ರಕಾರ ಕ್ಲಾಸ್ ಬಗ್ಗೆ ತೀರ್ಮಾನಿಸಲಾಗುವುದು.
ಆನ್ ಲೈನ್, ಆಫ್ ಲೈನ್ ತರಗತಿ ಪಡಿಯೋ ಅವಕಾಶ ವಿದ್ಯಾರ್ಥಿಗೆ ಬಿಟ್ಟಿದ್ದಾಗಿದೆ. ಕಾಲೇಜಿಗೆ ಬರೋರು ರಿಜಿಸ್ಟರ್ ಮಾಡಿಕೊಳ್ಳಬೇಕು.
ಇದನ್ನೂ ಓದಿ : ನೆರೆ ಹಾನಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಣೆ : ಸಿಎಂ ಬಿಎಸ್ ವೈ
ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮದ ವ್ಯವಸ್ಥೆ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಾಕ್ಟಿಕಲ್ ಕ್ಲಾಸ್ ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಯುಜಿಸಿ ನಿಯಮದ ಪ್ರಕಾರ ಕಾಲೇಜು ಪ್ರಾರಂಭ ಮಾಡಲಾಗುತ್ತದೆ.
ವಿದ್ಯಾರ್ಥಿಗಳ ಒತ್ತಾಸೆ ಮೇರೆಗೆ ಕಾಲೇಜು ಪ್ರಾರಂಭ ಮಾಡುವ ನಿರ್ಧಾರ ಸಭೆಯಲ್ಲಿ ಮಾಡಲಾಯಿತು. ಪ್ರತಿ ಕಾಲೇಜಿನಲ್ಲಿ ಟಾಸ್ಕ್ ಫೋರ್ಸ್ ಇರುತ್ತೆ.
ಅಲ್ಲದೆ ಪ್ರತಿ ಜಿಲ್ಲೆಗೆ ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಡಿಸಿಎಂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ 1ರಿಂದ 12ನೇ ತರಗತಿಯ ಶೇ.30ರಷ್ಟು ಪಠ್ಯ ಕಡಿತ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel