ಅಮೆರಿಕಾ ಅಮೆರಿಕಾದಂತಹ ಸಿನಿಮಾ ನೀಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರು ಮತ್ತೊಂದು ಸನಿಮಾ ಮಾಡುತ್ತಿದ್ದಾರೆ.
ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಟ್ರಿಬ್ಯೂಟ್ ಥರವೇ ಇದೆ. ಹೆಸರು ಇಡದೇ ಇರುವ ಚಿತ್ರದಲ್ಲಿಯೂ ತ್ರಿಕೋನ ಪ್ರೇಮ ಕಥೆ ಇದೆ ಎನ್ನಲಾಗಿದೆ. ನಾಗತಿಹಳ್ಳಿ ಮೇಷ್ಟ್ರು 90ರ ದಶಕದಲ್ಲಿ ಹೇಳಿದ್ದ ಅಮೆರಿಕಾ ಅಮೆರಿಕಾ ಸಿನಿಮಾ ಮಾಡಿದ್ದರೂ ಅದು ಇಂದಿಗೂ ತಾಜಾ ಆಗಿಯೇ ಇದೆ. ಈ ಸಿನಿಮಾ ಬಂದು 26 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಇನ್ನೂ ಒಂದು ತ್ರಿಕೋನ ಸಿನಿಮಾ ಮಾಡುತ್ತಿದ್ದಾರೆ.
ಈಗಾಗಲೇ ಈ ಚಿತ್ರದ ಇಂಡಿಯಾ ಶೆಡ್ಯೂಲ್ ಪೂರ್ಣ ಆಗಿದೆ. ಚಿತ್ರದ ಇತರ ಭಾಗದ ಶೂಟಿಂಗ್ ಅಮೆರಿಕಾದಲ್ಲಿಯೇ ನಡೆಯುತ್ತಿದೆ. ಶೂಟಿಂಗ್ ಟೈಮ್ ನಲ್ಲಿಯ ಒಂದಷ್ಟು ಫೋಟೋಗಳನ್ನು ನಟಿ ಶಾನ್ವಿ ಶ್ರೀವಾಸ್ತವ ಶೇರ್ ಮಾಡಿಕೊಂಡಿದ್ದಾರೆ.
ನಾಗತಿಹಳ್ಳಿ ಮೇಷ್ಟ್ರ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ನಟಿಸುತ್ತಿದ್ದಾರೆ. ನಿರೂಪ್ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ ಎನ್ನಲಾಗಿದೆ. ಈ ನಾಯಕ ನಟರ ನಡುವೆ ನಟಿ ಶಾನ್ವಿ ಶ್ರೀವಾಸ್ತವ ಇದ್ದಾರೆ. ಇವರ ಮಧ್ಯೆದ ತ್ರಿಕೋನ ಲವ್ ಸ್ಟೋರಿ ಶೂಟಿಂಗ್ ಅಮೆರಿಕದಲ್ಲಿ ನಡೆಯುತ್ತಿದೆ.