ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬನ್ನಿ ಮತ್ತೆ ದುಡಿಯೋಣ, ನಮ್ಮ ದೇಶವನ್ನ ಮತ್ತೆ ಕಟ್ಟೋಣ ಸಂದೇಶ ಸಾರಿದ ನಟ ಸೃಜನ್ ಲೋಕೇಶ್

admin by admin
May 23, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರು, ಮೇ 23 : ಲಾಕ್ ಡೌನ್ ನಿಂದ ಚಲನಚಿತ್ರರಂಗದಲ್ಲಿ ‌ಬಹುತೇಕ ಎಲ್ಲಾ ಕೆಲಸಗಳು ನಿಂತು ಹೋಗಿದ್ದು, ಇದರಿಂದ ಕಲಾವಿದರು, ಕ್ಯಾಮೆರಾ ಮಾನ್‍ಗಳು, ತಂತ್ರಜ್ಞರು ಸೇರಿದಂತೆ ಅನೇಕರು ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ‌ಮಜಾಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಅವರು ಒಂದು ಹೊಸ ಪ್ರಯೋಗಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.

20 ಛಾಯಾಗ್ರಾಹಕರನ್ನು ಬಳಸಿಕೊಂಡು ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿಯೇ ಒಂದು ಕ್ರಿಯೇಟಿವ್ ವಿಡಿಯೋವನ್ನು ತಯಾರಿಸಿದ್ದಾರೆ.‌ ಈ ಮುಖಾಂತರ ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗಳ ಮೂಲಕ ಮಹತ್ವದ ಸಂದೇಶಗಳನ್ನು ರವಾನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಹಂಚಿ ಕೊಂಡಿರುವ ಸೃಜನ್ ಲೋಕೇಶ್ ಈ ವಿಡಿಯೋಗೆ ಬನ್ನಿ ಮತ್ತೆ ದುಡಿಯೋಣ, ನಮ್ಮ ದೇಶವನ್ನ ಮತ್ತೆ ಕಟ್ಟೋಣ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026

beindianbuyindian ಎಂಬ ಹ್ಯಾಶ್‍ಟ್ಯಾಗ್ ನಲ್ಲಿ ಪೋಸ್ಟ್ ಮಾಡಿರುವ ಆ ವಿಡಿಯೋದಲ್ಲಿ ಸೃಜನ್ ಲೋಕೇಶ್,  ಎಲ್ಲರಿಗೂ ನಮಸ್ಕಾರ, ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧವೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ, ಈಗ ಕಾಡುತ್ತಿರುವ ಮಹಾಮಾರಿ ಕೊರೊನಾವೇ ಆಗಿರಲಿ.. ಸಮಸ್ಯೆಗೆ ಹೆದರಿಕೊಂಡು ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲಿ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡಿದ್ದೇವೆ.

ಇನ್ನು ‌ದೇಶದ ಸಂಪತ್ತಿಗೋಸ್ಕರ ಹೋರಾಡೋಣ ಎಂದು ಹೇಳಿದ್ದಾರೆ. ಹೂ, ಹಣ್ಣು, ತರಕಾರಿ ಯಾವುದೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ಆತ್ಮನಿರ್ಭರ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂಬ ಸಂದೇಶವನ್ನು ತಿಳಿಸಿದ್ದಾರೆ. ವಿಡಿಯೋದಲ್ಲಿ ತುಂಬಾ ಶಾಟ್‍ಗಳನ್ನು ತೆಗೆದಿರುವ ಬಗ್ಗೆ ಅವರು, ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಯೋಚನೆ ಮಾಡುತ್ತಿದ್ದೀರ. ಈ ಶಾಟ್ ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನೀಷಿಯನ್ಸ್ ಸೇರಿದಂತೆ ಹಲವರಿಗೆ ಬಹಳ ಕಷ್ಟವಾಗಿತ್ತು. ಇದಕ್ಕೆ ಸ್ಪಂದಿಸಿ ಅನೇಕ ಜನರು ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದಗಳು, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್‍ನಲ್ಲಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರುಗಳು 10 ವರ್ಷದಿಂದ ನನ್ನ ಜೊತೆ ಇದ್ದವರು. ಇವರೆಲ್ಲರಿಗೂ ಏನಾದರೂ ನಾನು ಸಹಾಯ ಮಾಡಬೇಕೆಂದುಕೊಂಡೆ. ಆದರೆ ಅವರು, ನಮಗೆ ಸಹಾಯ ಮಾಡಬೇಕು ಎಂದು ಅನಿಸಿದರೆ ದಯವಿಟ್ಟು ಏನಾದರೂ ಕೆಲಸ ಕೊಡಿ ಎಂದರು. ಹಾಗಾಗಿ ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನು ಅವರೇ ದುಡಿದಿದ್ದಾರೆ.

ಈ ಲಾಕ್ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಒಂದು ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಈ ಬದುಕು ಭಗವಂತ ಹೇಳಿದ ಆ್ಯಕ್ಷನ್ ನಿಂದ ಶುರುವಾಗುತ್ತದೆ ಮತ್ತು ಅವನು ಹೇಳಿದ ಕಟ್‍ನಿಂದ ಕೊನೆಯಾಗುತ್ತದೆ. ಈ ಆ್ಯಕ್ಷನ್ ಕಟ್ ನಡುವಿನ ಜೀವನದಲ್ಲಿ ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶ ನೀಡಿದ್ದಾರೆ.

ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram