ಕಾಂಗೋ : ಕಾಂಗೋದಲ್ಲಿ ಪತ್ತೆ ಹಚ್ಚದ ಕಾಯಿಲೆಯಿಂದಾಗಿ ಆಗಸ್ಟ್ ನಿಂದ ಇಲ್ಲಿಯರೆಗೂ 165ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರೋದಾಗಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಹಲವಾರು ವರದಿಗಳ ಪ್ರಕಾರ, ಆಗಸ್ಟ್‌ನಲ್ಲಿ ಕ್ವಿಲು ಪ್ರಾಂತ್ಯದ ಗುಂಗು ಪಟ್ಟಣದಲ್ಲಿ ಈ ರೋಗವು ಮೊದಲು ಕಾಣಿಸಿಕೊಂಡಿತ್ತು. ಇದು ಐದು ವರ್ಷದವರೆಗಿನ ಮಕ್ಕಳನ್ನು ಭಾಧಿಸುತ್ತಿದೆ.
ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಜೀನ್-ಪಿಯರೆ ಬಸಕೆ ಅವರು ಕೆಲವು ಸೋಂಕಿತ ಮಕ್ಕಳಲ್ಲಿ ಮಲೇರಿಯಾದಂತಹ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಕ್ವಿಲು ಆರೋಗ್ಯ ಸಚಿವಾಲಯವು ರೋಗದ ಮೂಲವನ್ನು ಅಧ್ಯಯನ ಮಾಡಲು ಮತ್ತು ಪ್ರತಿರಕ್ಷಣಾ ಕ್ರಮಗಳನ್ನು ಅಭಿವೃದ್ಧಿಪಡಿಸಬೇಕಿದೆ.