Congress: ಪ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ

1 min read
Congress Saaksha Tv

ಪ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ

ಚಿತ್ರದುರ್ಗ: ಪ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಡದಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಮಂಗಳವಾರ ಹಿರಿಯೂರು ಪಟ್ಟಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಬುಜಗಜೀವನ್ ರಾಮ್ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ.

ಹೀಗಾಗಿ ಕಾಂಗ್ರೆಸ್ ಮಾಜಿ ಸಚಿವ ಡಿ.ಸುಧಾಕರ್, ಎಂಎಲ್‍ಸಿ ಚುನಾವಣೆಯ ಪರಾಜಿತ ಅಭ್ಯರ್ಥಿ ಸೋಮಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಅವರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು.

Chitradurga Saaksha Tv

ಸಭೆಯಲ್ಲಿ ಸಚಿವ ಡಿ.ಸುಧಾಕರ್ ಮತ್ತು ಸೋಮಶೇಖರ್ ಕಾರ್ಯಕರ್ತರು ರಾಜ್ಯ ನಾಯಕರನ್ನು ಓಲೈಸಲು ಫ್ಲೆಕ್ಸ್ ಹಾಕಿಸಲು ನಾ ಮುಂದು, ನೀ ಮುಂದು ಎಂದು ಮುಗಿಬಿದ್ದಿದ್ದಾರೆ. ಈ ವೇಳೆ ಸೋಮಶೇಖರ್ ಹಾಕಿಸಿದ್ದ ಫ್ಲೆಕ್ಸನ್ನು ಸುಧಾಕರ್ ಬೆಂಬಲಿಗರು ತೆರವುಗೊಳಿಸಿದ್ದಾರೆ. ಈ ಕಾರಣ ಆಕ್ರೋಶಗೊಂಡಿರೋ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್‍ನಲ್ಲೂ ಅಲ್ಪಸಂಖ್ಯಾತರ ಕಡೆಗಣನೆ ಶುರುವಾಗಿದೆ ಎಂದು ಆರೋಪಿಸಿದ್ದಾರೆ.

ಕೋಪಗೊಂಡ ಸುಧಾಕರ್ ಬೆಂಬಲಿಗರಾದ ಮಾಜಿ ಜಿಪಂ ಸದಸ್ಯರಾದ ನಾಗೇಂದ್ರ ನಾಯಕ್, ಅಶೋಕ್ ಹಾಗೂ ಸುರೇಶ್ ಬಾಬು ಕಾಂಗ್ರೆಸ್ ನಾಯಕರ ಮುಂದೆಯೇ ವಾಗ್ವಾದ ನಡೆಸಿದ್ದಾರೆ. ಕೊನೆಗೆ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಸೋಮಶೇಖರ್ ಬೆಂಬಲಿಗರಾದ ಅಸ್ಲಂ ಭಾಷಾ, ಮಹಮ್ಮದ್ ಗಫರ್, ಸೈಯದ್ ಅಕ್ತಾರ್ ಭಾಷಾ ಗಾಯಗೊಂಡು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಬಲಿಗರ ಘರ್ಷಣೆ ವೇಳೆ ನಾಯಕರು ಮೂಕ ಪ್ರೇಕ್ಷಕರಾಗಿದ್ದರು. ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd