Congress – ನಿಮಗೆ ತಾಕತ್ತಿದ್ದರೆ ಗುಂಡಿಗಳ ಪಥ ಮುಚ್ಚಿ ತೋರಿಸಿ
ಬೆಂಗಳೂರು : ನಿಮಗೆ ತಾಕತ್ತಿದ್ದರೆ ಗುಂಡಿಗಳ ಪಥ ಮುಚ್ಚಿ ತೋರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜ್ಯ ಕಾಂಗ್ರೆಸ್ ಸವಾಲಾಕಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮಾನ್ಯ #PayCM ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ದಮ್ಮು ತಾಕತ್ತಿನ ಡೈಲಾಗ್ ಹೇಗಿದೆ ಎಂದರೆ ಕಾಮಿಡಿಯನ್ ಒಬ್ಬ ವಿಲನ್ ಪಾತ್ರದ ಡೈಲಾಗ್ ಹೊಡೆದಂತಿದೆ!
ಕಾಮಿಡಿಯನ್ ವಿಲನ್ ಪಾತ್ರ ಮಾಡಿದರೂ ಕಾಮಿಡಿಯೇ ಎನಿಸುತ್ತದೆ! ನಿಮ್ಮ ಸರ್ಕಾರದ್ದು ವಿಜಯಪಥ ಅಲ್ಲ, ಸಾವಿನ ಪಥ, ಗುಂಡಿಗಳ ಪಥ. ನಿಮಗೆ ತಾಕತ್ತಿದ್ದರೆ ಗುಂಡಿಗಳ ಪಥ ಮುಚ್ಚಿ ತೋರಿಸಿ.

40% ಕಿರುಕುಳಕ್ಕೆ ಮತ್ತೊಬ್ಬ ಗುತ್ತಿಗೆದಾರ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. 2 ವರ್ಷದಿಂದ 1 ಕೋಟಿಗೂ ಅಧಿಕ ಮೊತ್ತದ ಬಿಲ್ ಪಾವತಿಸದೆ ಕಮಿಷನ್ನಿಗಾಗಿ ಕಿರುಕುಳ ನೀಡಲಾಗುತ್ತಿದೆ.
ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ #40 ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಬಲಿ ಬೇಕು? ಭ್ರಷ್ಟಾಚಾರದ ಚರ್ಮ ಅದೆಷ್ಟು ದಪ್ಪವಾಗಿದೆ ಎಂದು ಪ್ರಶ್ನಿಸಿದೆ.