ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ : ಡಿ.ಕೆ.ಶಿವಕುಮಾರ್ DK Shivakumar saaksha tv
ಮಂಡ್ಯ : ಪ್ರಪಂಚದ ಬಿಗ್ಗೆಸ್ಟ್ ಡೆಮಾಕ್ರಸಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ನಮ್ಮ ಇತಿಹಾಸಕ್ಕೂ, ಬಿಜೆಪಿ ಇತಿಹಾಸಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಪುರದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ನಮ್ಮ ಇತಿಹಾಸಕ್ಕೂ, ಬಿಜೆಪಿ ಇತಿಹಾಸಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮದು ತ್ಯಾಗ, ಬಲಿದಾನದ ಇತಿಹಾಸ. ಯಾರೂ ಪರ್ಮನೆಂಟ್ ಇರಲು ಸಾಧ್ಯವೇ ಇಲ್ಲ. ಇದ್ದಾಗ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಕೋವಿಡ್ ನಂತ ಕಷ್ಟದ ಸಮಯದಲ್ಲಿ ನನಗೆ ಅಧಿಕಾರ ಸಿಕ್ತು. ನಮ್ಮ ಪ್ರಾಣ ಮುಡಿಪಾಗಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡಿದ್ದೇವೆ. ದೇಶಕ್ಕೆ ಮಾದರಿಯಾಗಿ ಜನರನ್ನ ಉಳಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ. ಅಧಿಕಾರ ಇಲ್ಲದಿದ್ದರೂ ದೇಶಕ್ಕಾಗಿ ಹೋರಾಟ ಮಾಡೋದು ಕಾಂಗ್ರೆಸ್ ಧ್ಯೇಯ. ಪ್ರಪಂಚದ ಬಿಗ್ಗೆಸ್ಟ್ ಡೆಮಾಕ್ರಸಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಾತನಾಡಿ ಡಿಕೆಶಿ, ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯವಾಗಿದೆ. ಪ್ರತಿಯೊಬ್ಬರಿಗಾಗಿ ಮೇಕೆದಾಟು ಅಭಿಯಾನವಾಗಿದೆ. ಮಂಡ್ಯದವರ ಚೆಡ್ಡಿ ಮೆರವಣಿಗೆ ಗಮನಿಸಿದ್ದೇನೆ. ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಕಿಚ್ಚು ಕೇಳಿದ್ದೇನೆ. ಮತ್ತೊಮ್ಮೆ ಆ ರೀತಿಯ ಹೋರಾಟದ ಕಿಚ್ಚು ನಿಮ್ಮ ಮೇಲಿದೆ. ಮೇಕೆದಾಟು ಯೋಜನೆಗೆ ಹೆಚ್ಡಿಕೆ ಟೀಕೆ ಮಾಡ್ತಿದ್ದಾರೆ. ಅವರ ಟೀಕೆ ಬಗ್ಗೆ ನಮಗೆ ಬೇಸರವಿಲ್ಲ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆ. ಎಲ್ಲಾ ಪಕ್ಷದವರಿಗೂ ಅವಶ್ಯಕತೆ ಇರುವ ಯೋಜನೆ ಇದು. ಈ ಯೋಜನೆ ಪಕ್ಷಾತೀತವಾದದ್ದು. ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ಕೊಡ್ತೀವಿ. ಈ ದೇಶದ ಚರಿತ್ರೆಗೆ ಎಲ್ಲರೂ ಪಾಲುದಾರರಾಗಬೇಕು ಎಂದು ಕರಕೊಟ್ಟರು.









