ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅತೃಪ್ತರನ್ನು ಸೆಳೆದಂತೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಅದೇ ಕಾರ್ಯ ಮಾಡಲು ಮುಂದಾಗಿದೆ.
ಡಿ.ವಿ.ಸದಾನಂದಗೌಡ, ಕರಡಿ ಸಂಗಣ್ಣ, ಎಂಪಿ ರೇಣುಕಾಚಾರ್ಯ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ನಾಯಕರಿಗೆ ಗಾಳ ಹಾಕಲು ಮುಂದಾಗಿದೆ. ಬೆಂಗಳೂರು ಉತ್ತರದಲ್ಲಿ ಟಿಕೆಟ್ ವಂಚಿತ ಸದಾನಂದ ಗೌಡ ರನ್ನು ಈಗಾಗಲೇ ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆ. ಈ ಕುರಿತು ಸದಾನಂದ ಗೌಡರೇ ಬಹಿರಂಗಪಡಿಸಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಸ್ಪಷ್ಟನೆ ನೀಡುತ್ತೇನೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಬಿಜೇಪಿ ಟೆಕೆಟ್ ವಂಚಿತ ಮಾಜಿ ಸಚಿವ ಜೆಎಲ್ ಮಾಧುಸ್ವಾಮಿ ಈಗಾಗಲೇ ಕಾಂಗ್ರೆಸ್ ಕದ ತಟ್ಟಿದ್ದಾರೆ. ಈಗ ಮತ್ತೆ ಬಿಜೆಪಿ ಬಿಜೆಪಿಯ ಅತೃಪ್ತರನ್ನು ಕಾಂಗ್ರೆಸ್ ತೆಕ್ಕೆಗೆ ಎಳೆದುಕೊಳ್ಳಲು ತೆರೆಮರೆಯ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ.