ದಿನೇಶ್ ಗೂಳಿಗೌಡ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ : ಚಲುವರಾಯಸ್ವಾಮಿ Chaluvarayaswamy saaksha tv
ಮಂಡ್ಯ : ದಿನೇಶ್ ಗೂಳಿಗೌಡ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ. ನಮಗೆ ಯಾವುದೇ ಅಧಿಕಾರ ಇಲ್ಲದ ಸಮಯದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ.
ಇದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಬೇಕು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಜಯ ಕಂಡಿದ್ದು, ಈ ಬಗ್ಗೆ ಮಾತನಾಡಿದ ಚಲುವರಾಯಸ್ವಾಮಿ, ಕಳೆದ ಮೂರು ವರ್ಷ ಮಂಡ್ಯ ಕಾಂಗ್ರೆಸ್ಗೆ ಕರಾಳವಾಗಿತ್ತು.
ಪಂಚಾಯಿತಿಯಲ್ಲೂ ಸಹ ಜೆಡಿಎಸ್ಗಿಂತಲೂ ನಾವು ಕಡೆಮೆ ಇದ್ದೇವು. MLC ಚುನಾವಣೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ.
ದಿನೇಶ್ ಗೂಳಿಗೌಡ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ. ನಮಗೆ ಯಾವುದೇ ಅಧಿಕಾರ ಇಲ್ಲದ ಸಮಯದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಇದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಬೇಕು ಎಂದು ಹೇಳಿದರು.
ಈ ಗೆಲುವು ಪ್ರಥಮ ಹೆಜ್ಜೆ, ಇದನ್ನ ಜವಬ್ದಾರಿಯನ್ನಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್, ರೈತ ಸಂಘದ ಸದಸ್ಯರು ನಮ್ಮನ್ನ ಬೆಂಬಲಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಸಹಕರಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದರು. ನಾವು ಎಲ್ಲೂ ಯಾರನ್ನು ಬೆಂಬಲ ಕೇಳಿರಲಿಲ್ಲ.
ಬಿಜೆಪಿಯಲ್ಲೂ ಕೆಲವರು ನಮ್ಮ ಅಣ್ಣತಮ್ಮಂದಿರು ನಮಗೆ ಸಹಕರಿಸಿದ್ದಾರೆ .
ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್ವೈಗೆ ಈ ಚುನಾವಣೆ ಉತ್ತರ ನೀಡಿದೆ ಎಂದು ಟಾಂಗ್ ನೀಡಿದರು.