ಕೊರೊನಾ ಲಸಿಕೆಗಾಗಿ ಕಾಂಗ್ರೆಸ್ ಮುಖಂಡನ ಆವಾಜ್
ಬೆಂಗಳೂರು : ಕೊರೊನಾ ವ್ಯಾಕ್ಸಿನ್ ಗಾಗಿ ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ನಗರದ ಅನೇಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಸರತಿ ಸಾಲಲ್ಲಿ ನಿಂತಿದ್ದವರನ್ನು ಬಿಟ್ಟು ತಮ್ಗೆ ವ್ಯಾಕ್ಸಿನ್ ನೀಡುವಂತೆ ಲಸಿಕಾ ಕೇಂದ್ರದ ಸಿಬ್ಬಂದಿಯನ್ನು ಕೇಳಿದ್ದು ಸಿಬ್ಬಂದಿ ಸಾಲಿನಲ್ಲಿ ಬರುವಂತೆ ತಿಳಿಸಿದ್ದಾರೆ.
ಈ ವೇಳೆ ತಾನು ಹಿರಿಯ ವೈದ್ಯರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದೇನೆ ಲಸಿಕೆ ಕೊಡಿ ಎಂದು ಆವಾಜ್ ಹಾಕಿದ್ದಾರೆ.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಆದ್ರೂ ಮಲ್ಲಿಕಾರ್ಜುನ್ ಪೊಲೀಸರಿಗೂ ಆವಾಜ್ ಹಾಕಿದ್ದಾರೆ. ಇನ್ನು ಆನೇಕಲ್ ಲಸಿಕಾ ಕೇಂದ್ರದಲ್ಲಿ ರಾಜಕೀಯ ಪ್ರಭಾವ ನಡೆಯುತ್ತಿದ್ದು, ಆರೋಗ್ಯ ಪೆÇಟರ್ಲ್ ನಲ್ಲಿ ನೊಂದಣಿ ಮಾಡಿಕೊಂಡವರಿಗೆ ಲಸಿಕಿ ಕೊರತೆಯಾಗಿದೆ ಎಂದು ಸ್ಥಳೀಯರು ದೋರುತಿದ್ದಾರೆ.