ವರನಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟು ಬಿಜೆಪಿಯನ್ನು ಉರಿಸಿದ ಕಾಂಗ್ರೆಸ್ ನಾಯಕ..!
ಪೆಟ್ರೋಲ್ ದರ ದಿನೇ ದಿನೇ ಗಗನಕ್ಕೇರುತ್ತಿದ್ದು, ಮಧ್ಯಮ ವರ್ಗದ ಜನರಿಗೆ ಶಾಕ್ ಶಾಕ್ ಮೇಲೆ ಶಾಕ್ ಸಿಕ್ಕಿದೆ.. 100 ರೂಪಾಯಿಗಳ ಗಡಿ ದಾಟಿದ್ದು, ಎಷ್ಟೋ ಜನ ಗಾಡಿಗಳಿಗಿಂತ ಸೈಕಲ್ ನಲ್ಲಿ ಓಡಾಡುವುದೇ ಬೆಸ್ಟ್ ಅನ್ನೋ ಯೋಚನೆಗೆ ಬಂದುಬಿಟ್ಟಿದ್ದಾರೆ.. ಈ ನಡುವೆ ಪೆಟ್ರೋಲ್ ದರ ಹೆಚ್ಚಳ ಸಂಬಂಧ ಆಗಾಗ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತೆ..
ಇದೀಗ ಕಾಂಗ್ರೆಸ್ ನಾಯಕರೊಬ್ಬರು ಮದುವೆಯಲ್ಲಿ ವರನಿಗೆ ಪೆಟ್ರೋಲ್ ಗಿಫ್ಟ್ ಕೊಡುವ ಮೂಲಕ ಬಿಜೆಪಿಯನ್ನ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಮೋದಿ ಸರ್ಕಾರ ಬಂದಾಗಿನಿಂದಲೂ ಪೆಟ್ರೋಲ್ ದರ ಹೆಚ್ಚಳವಾಗುತ್ತಲೇ ಇದೆ ಅನ್ನೋ ಆರೋಪಗಳಳಿವೆ.
ಇದರ ವಿರುದ್ಧ ವಿಕ್ಷ ನಾಯಕರು ಆಗಾಗ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದೀಗ ತೆಲಂಗಾಣದ ಸ್ಥಳೀಯ ಕಾಂಗ್ರೆಸ್ ನಾಯಕ ಮೋಹಾಸಿನ್ ಎಂಬವರು ತಮ್ಮ ಸ್ನೇಹಿತ ಸೈಯದ್ ರಯಾದ್ ವಿವಾಹ ಮಹೋತ್ಸವದ ದಿನದಂದು 5 ಲೀಟರ್ ಪೆಟ್ರೋಲ್ ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ವಿಶೇಷ ಅಂದರೆ ವರ ಸೈಯದ್ ರಯಾದ್ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಇವರ ವಿವಾಹವು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಕೋಹಿರ್ ಎಂಬಲ್ಲಿ ನಡೆದಿದೆ.
5 litres Petrol wedding gift to a newly married guy by his friends. #Telangana. pic.twitter.com/l3liAdDVqu
— Siddhu Manchikanti (@SiDManchikanti) July 28, 2021
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಯಾದ್ ಸ್ನೇಹಿತರ ಸಮ್ಮುಖದಲ್ಲಿ ತಮಗೆ ಬಂದಿರುವ ಗಿಫ್ಟ್ ಪ್ಯಾಕ್ ತೆರೆದು ಅದರೊಳಗೆ ಇರುವ ಪೆಟ್ರೋಲ್ ಕ್ಯಾನ್ ಇರೋದನ್ನ ನೋಡಿ ನಕ್ಕಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮೋಹಾಸಿನ್, ಕೇಂದ್ರ ಸರ್ಕಾರಕ್ಕೆ ಈ ಮೂಲಕ ಏರುತ್ತಿರುವ ಪೆಟ್ರೋಲ್ ಬೆಲೆ ಇಳಿಸುವ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವಾಯುವಿಹಾರಕ್ಕೆ ಹೊರಟಿದ್ದಾಗ ಆಟೋ ಗುದ್ದಿ ನ್ಯಾಯಾಧೀಶರ ಸಾವು – ಕೊಲೆ ಅನುಮಾನ ಮೂಡಿಸಿದ VIDEO