Congress | ಕಾಂಗ್ರೆಸ್ ಪ್ರತಿಭಟನೆ : ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ ಎಂದ ಕಟೀಲ್
ಬೆಂಗಳೂರು : ದೇಶದಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಜಾರಿ ನಿರ್ದೇಶನಾಲಯ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ವಿಚಾರಣೆ ಖಂಡಿಸಿ, ಡೆಲ್ಲಿಯ ಇಡಿ ಮುಖ್ಯ ಕಚೇರಿ ಹಾಗೂ ದೇಶದ ವಿವಿಧ ಇಡಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿವೆ.

ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಇ.ಡಿ ತನಿಖೆಯನ್ನು ತಪ್ಪಿಸಲು ಒದ್ದಾಡುತ್ತಿರುವಾಗ, ಪಕ್ಷದ ಅಧ್ಯಕ್ಷೆ & ಅವರ ಮಗನನ್ನು ಇ.ಡಿ.ಯಿಂದ ರಕ್ಷಿಸೋಕೆ ನಿಂತಿರುವುದು ಕಾಂಗ್ರೆಸ್ಸಿನ ದಿವಾಳಿತನಕ್ಕೆ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರು ಒಂದು ಕುಟುಂಬದ ಊಳಿಗ ಮಾಡಲು ಮಾತ್ರ ಎಂದಾಗಿರುವುದು ಕಾಂಗ್ರೆಸ್ಸಿನ ದುರಂತ.
https://twitter.com/nalinkateel/status/1536212435270782976?s=20&t=6NrZ4m5fSSE8xrwU3rB3gQ
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾನೂನಿಗೆ ಅತೀತರಾದವರಲ್ಲ. ಅವರು ಇಡಿ ವಿಚಾರಣೆ ಎದುರಿಸಿದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಪಟಾಲಂ ಕಟ್ಟಿ ಯಾಕೆ ಇಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು. ಇದರಿಂದ ಕಳ್ಳನ ಮನಸ್ಸು ಹುಳ್ಳಗೆ ಎಂದು ಸಾಬೀತಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ ಎಂದು ಪ್ರಶ್ನಿಸಿದ್ದಾರೆ.