Congress | ಈಶ್ವರಪ್ಪಗೆ ಮಂತ್ರಿ ಪದವಿ ಸಿಗದು, ಹರಕೆ ಕುರಿಯಾಗುವುದು ತಪ್ಪದು
ಬೆಂಗಳೂರು : ನನ್ನನ್ನ ಸಂಪುಟಕ್ಕೆ ತಗೊಬೇಕಾಗಿತ್ತು ಯಾಕೆ ತಗೊಂಡಿಲ್ವೊ ಗೊತ್ತಿಲ್ಲ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಯನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಕುಟುಕಿದೆ.
ಸಚಿವ ಸ್ಥಾನದ ಬಗ್ಗೆ ಈಶ್ವರಪ್ಪ “ನನ್ನ ಮೇಲೆ ಆರೋಪ ಬಂದಿತ್ತು ಈಗ ಕ್ಲೀನ್ ಚಿಟ್ ಸಿಕ್ಕಿದೆ. ಮತ್ತೆ ನನ್ನನ್ನ ಸಂಪುಟಕ್ಕೆ ತಗೊಬೇಕಾಗಿತ್ತು ಯಾಕೆ ತಗೊಂಡಿಲ್ವೊ ಗೊತ್ತಿಲ್ಲ.
ಈ ಬಗ್ಗೆ ಅಸಮಾಧಾನ ಇಲ್ಲ ಎಂದು ನಾನು ಸುಳ್ಲು ಹೇಳಲ್ಲ. ಸಿದ್ದರಾಮಯ್ಯ ರೀತಿ ಸುಳ್ಳು ಹೇಳೋದು ನಾನಲ್ಲ.
ನನಗೆ ಅಸಮದಾನ ಇರೋದು ನಿಜ, ವರಿಷ್ಟರು ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತಾರೆ.
ನನಗೆ ಸಚಿವ ಸ್ಥಾನ ನೀಡೋ ಬಗ್ಗೆ ನಾನು ಯಾರೊಂದಿಗು ಮಾತನಾಡಿಲ್ಲ. ನಾಯಕರೇ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹಾಸನದಲ್ಲಿ ಹೇಳಿಕೆ ನೀಡಿದ್ದರು.

ಇದಕ್ಕೆ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ಮದುವೆ ಗಂಡು ಆಗೋಕೆ ತಯಾರಿದ್ದೇನೆ ಎಂದಿದ್ರು, ಆದರೆ ಬಿಜೆಪಿ ಮದುವೆ ಮಾಡಲು ತಯಾರಿಲ್ಲ!
ಮದುವೆ ಗಂಡಿಗೆ ಯಾವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ! ‘ಅಸಮಾಧಾನ ಇದೆ’ ಎಂದು ಅದೆಷ್ಟೇ ಒತ್ತಿ ಒತ್ತಿ ಹೇಳಿದರೂ ಈಶ್ವರಪ್ಪನವರಿಗೆ ಮಂತ್ರಿ ಪದವಿ ಸಿಗದು, ಹರಕೆಯ ಕುರಿಯಾಗುವುದು ತಪ್ಪದು ಎಂದು ಬರೆದುಕೊಂಡಿದೆ.