ಮೈಸೂರು: ಕಾಂಗ್ರೆಸ್ ಸರ್ಕಾರವನ್ನು ಕೆಳಗೆ ಇಳಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಮೈಸೂರು ಚಲೋ ನಡೆಸುತ್ತಿದೆ. ಇನ್ನೊಂದೆಡೆ ಬಿಜೆಪಿ (BJP) ಗೆ ಠಕ್ಕರ್ ಕೊಡುವುದಕ್ಕಾಗಿ ಕಾಂಗ್ರೆಸ್ (Congress) ಪಕ್ಷವು ಬಿಜೆಪಿ ನೀಡಿದ್ದ ಜಾಹೀರಾತನ್ನು ಅಸ್ತ್ರವಾಗಿಸಿಕೊಂಡಿದೆ.
ಶುಕ್ರವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಈ ಸಮಾವೇಶದಲ್ಲಿ ಬಿಜೆಪಿ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಕುಟುಂಬದ ವಿರುದ್ದ ನೀಡಿದ್ದ ಜಾಹೀರಾತು (Advertisement) ಬಳಕೆಯಾಗಿದೆ.
ದೇವೇಗೌಡರ ಕುಟುಂಬ ಮುಡಾ ಸೈಟ್ ಗಳನ್ನು ಪಡೆದ ಕುರಿತು ಹಿಂದೆ ಬಿಜೆಪಿ ನೀಡಿದ್ದ ಜಾಹೀರಾತನ್ನು ಕಾಂಗ್ರೆಸ್ ಬಳಸಿಕೊಂಡಿದೆ. ನಗರದ ಹಲವು ಸರ್ಕಲ್ ನಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಗೆ ಟಾಂಗ್ ಕೊಟ್ಟಿದೆ.