Congress vs BJP | ಸೋತು ಸುಣ್ಣವಾಗಿರುವ ಡಿಕೆಶಿಗೆ ಈಗ ಸಿದ್ದರಾಮಯ್ಯ ವಿಲನ್
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.
ಅಸಹಾಯಕಡಿಕೆಶಿ ಹ್ಯಾಷ್ ಟ್ಯಾಗ್ ಬಳಿಕ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದ್ದು, ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷಿತ ಗುರಿ ತಲುಪಲಾರದೆ ಸೋತು ಸುಣ್ಣವಾಗಿರುವ ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ವಿಲನ್ ಆಗಿ ಪರಿಣಮಿಸಿದ್ದಾರೆ. ಹಿಂದುತ್ವದ ವಿರುದ್ಧ ಮಾತನಾಡಿ ಡಿಕೆಶಿ ನಾಯಕತ್ವವನ್ನು ಮುಗಿಸುವುದು ಸಿದ್ದರಾಮಯ್ಯ ಮೊದಲ ಗುರಿ. ಇದನ್ನು ನೋಡಿಯೂ, ಅಸಹಾಯಕಡಿಕೆಶಿ ಎಂಬಂತಾಗಿದ್ದಾರೆ.
ತಮ್ಮ ವಿರುದ್ಧ ಉಗ್ರಪ್ಪ ಹೇಳಿಕೆ ನೀಡಿದರೂ ಡಿಕೆಶಿ ಏನು ಮಾಡಲಿಲ್ಲ. ಕೆಪಿಸಿಸಿ ಪ್ರಚಾರ ಸಮಿತಿಗೆ ಎಂ.ಬಿ.ಪಾಟೀಲರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದಾಗಲೂ ಮೌನಕ್ಕೆ ಶರಣಾದರು. ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ. ಇದರರ್ಥ ಡಿಕೆಶಿ ಅಸಹಾಯಕರೇ ?
ಧರ್ಮಗುರುಗಳ ವಿರುದ್ಧ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಅವರ ಪುತ್ರರತ್ನ ಡಾ.ಯತೀಂದ್ರ ಅವರಿಗೆ ಮಾತ್ರ ಸಂತೋಷ ನೀಡಿದೆ. ಎಷ್ಟೆಂದರೂ ತಂದೆಯಂತೇ ಮಗನಲ್ಲವೇ!! ಆದರೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಇದನ್ನು ಸಮರ್ಥಿಸುತ್ತಾರೆಯೇ? ನಿಮ್ಮ ನಿಲುವೇನು #ಅಸಹಾಯಕಡಿಕೆಶಿ ಅವರೇ ಎಂದು ಪ್ರಶ್ನಿಸಿದೆ. congress-vs-bjp- siddaramaiah vs D K Shivakumar