ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಆರಂಭವಾಗ್ತಿದೆ : ಡಿ.ಕೆ.ಶಿವಕುಮಾರ್ DK Shivakumar saaksha tv
ಮಂಡ್ಯ : ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಆರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ನೋಡಿದ್ದೀರಾ. ಹಾನಗಲ್ ನಲ್ಲಿ ಈಗಾಗಲೇ ನಾವು ಗೆದ್ದಿದ್ದೇವೆ.
ರಾಜ್ಯದ ಉಗ್ಗಲಕ್ಕೂ ಕಾಂಗ್ರೆಸ್ ಒಮ್ಮತದ ಮುಖ ತೋರುತ್ತಿದೆ. ನಾವೆಲ್ಲರೂ ಸಾಮೂಹಿಕ ನಾಯಕತ್ವ ಒಪ್ಪಿದ್ದೇವೆ.
ಗೂಳಿಗೌಡರನ್ನ ಗೆಲ್ಲಿಸಿ ನನ್ನ ಕೈ ಬಲಪಡಿಸಿ. ಬಿಜೆಪಿ, ಜೆಡಿಎಸ್ ಸ್ಥಳೀಯ ಸಂಸ್ಥೆಗಳಿಗೆ ಏನು ಕೊಟ್ಟಿಲ್ಲ.
ಹೀಗಾಗಿ ಅವರಿಗೆ ಹೇಳೋಕೆ ಏನೂ ಸಿಗಲ್ಲ. ಹಾಗಾಗಿ ನಾನು ನಮ್ಮ ಪಕ್ಷದ ಸಾಧನೆ ತಿಳಿಸೋಕೆ ಬಂದಿದ್ದೇನೆ ಎಂದು ತಿಳಿಸಿದರು.
ಇನ್ನು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲು ಬಿಜೆಪಿ ಕಾರಣ ಎಂದ ಆರೋಪಿಸಿದ ಡಿ.ಕೆ.ಶಿವಕುಮಾರ್, ಸೋಲಿನ ಭೀತಿಯಿಂದ ಚುನಾವಣೆ ಮುಂದೂಡಿಕೆ ಮಾಡಲಾಗಿದೆ.
ಚುನಾವಣೆ ಮುಂದೂಡಿ ಅಧಿಕಾರ ಮೊಟಕುಗೊಳಿಸಿದ್ದಾರೆ. ನಮ್ಮ ಪಕ್ಷ ಯುವಕನಿಗೆ ಅವಕಾಶ ಕೊಟ್ಟಿದೆ.
ನಮ್ಮ ಪಕ್ಷದಲ್ಲಿ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಬಲ ಕೊಟ್ಟಿದ್ದು ಕಾಂಗ್ರೆಸ್.
ನಿಮ್ಮ ಹಾಗೂ ಸ್ಥಳೀಯ ಸಂಸ್ಥೆಗಳ ಬಗ್ಗೆ ಧನಿಗೂಡಿಸುವವರಿಗೆ ಮತ ಕೊಡಿ. ಗ್ರಾಮ ಪಂಚಾಯಿತಿಗೂ ಸರ್ಕಾರಕ್ಕೂ ಕೊಂಡಿಯಾಗಿ ಕೆಲಸ ಮಾಡ್ತಾರೆ.
ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.









