ಸತತ ಸೋಲಿನ ನಂತರ ನಟ ಸಲ್ಮಾನ್ ಖಾನ್ ತಮಿಳಿನ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಭಾರೀ ಸದ್ದು ಮಾಡುತ್ತಿವೆ. ಅದಕ್ಕಾಗಿ ಹೊಸ ಪ್ರಯೋಗ ಮಾಡಲು ಸಜ್ಜಾಗಿದ್ದಾರೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಎಆರ್ ಮುರುಗದಾಸ್ ಜೊತೆ ಸಿನಿಮಾ ಮಾಡಲು ಕೈಜೋಡಿಸಿದ್ದಾರೆ.
ಈ ಕುರಿತು ಸಲ್ಮಾನ್ ಖಾನ್ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪ್ರತಿಭಾವಂತ ತಂಡವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಎಆರ್ ಮುರುಗದಾಸ್ ಮತ್ತು ನನ್ನ ಗೆಳೆಯ ಸಾಜಿದ್ ನಾಡಿಯಾವಾಲ ಜೊತೆ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ. ಈ ಸಿನಿಮಾ ಬಹಳ ವಿಶೇಷವಾಗಿರಲಿದೆ. ಈ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಅದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಸಿನಿಮಾದ ಶೂಟಿಂಗ್ ಪೋರ್ಚುಗಲ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ನಡೆಯಲಿದೆ. ಸುಮಾರು 400 ಕೋಟಿ ಬಜೆಟ್ನಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ.