ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ. ಒಂದೇ ದಿನ 3 ವಿವಿಧ ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿ. ಅಪಾರ ಪ್ರಮಾಣದ ಕಳ್ಳಭಟ್ಟಿ ಸಾರಾಯಿ ನಾಶ. ಬಾಗಲಕೋಟೆ ತಾಲೂಕಿನ ನಾಯನೇಗಲಿ ಹಾಗೂ ಸೀತಿಮನಿ ತಾಂಡಾದಲ್ಲಿ ದಾಳಿ ವೇಳೆ 800 ಲೀಟರ್ ಬೆಲ್ಲದ ಕೊಳೆ ನಾಶ. ಬೀಳಗಿ ತಾಲ್ಲೂಕಿನ ಬಿಸನಾಳ ಗ್ರಾಮದಲ್ಲಿ ದಾಳಿ.
ಅಂದಾಜು 200 ಲೀಟರ್ ಬೆಲ್ಲದ ಕೊಳೆ ನಾಶ. ಅರಣ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ. ಅರಣ್ಯ ಪ್ರದೇಶದಲ್ಲಿ ಬೆಲ್ಲದ ಕೊಳೆ ಪತ್ತೆ. ಕೊಡಗಳಲ್ಲಿ ಕೊಳೆ ಹೂತಿಟ್ಟ ಕಳ್ಳಭಟ್ಟಿ ದಂಧೆಕೊರರು. ಕಳ್ಳಭಟ್ಟಿ ಸಾಗಿಸುತ್ತಿದ್ದವರ ಸೆರೆಹಿಡಿದ ಅಧಿಕಾರಿಗಳು. ಮೂರು ಬೈಕ್ ಗಳು ಜಪ್ತಿ. ಬಾಗಲಕೋಟೆ ಹೊರ ವಲಯದಲ್ಲಿ ಬೈಕ್ ಗಳ ಜಪ್ತಿ. ಕಳ್ಳಭಟ್ಟಿ ಸಾಗಿಸುತ್ತಿದ್ದವರ ಬಂಧನ. ಒಟ್ಟು ಪ್ರತ್ಯೇಕ ಮೂರು ಪ್ರಕರಣಗಳು ದಾಖಲು.