ಅತಿ ಸುಲಭವಾಗಿ ಮಾಡಬಹುದಾದ 5 ರುಚಿಕರ ಸಿಹಿ ತಿನಿಸುಗಳ ರೆಸಿಪಿಗಳು ನಿಮಗಾಗಿ

1 min read

ಅತಿ ಸುಲಭವಾಗಿ ಮಾಡಬಹುದಾದ 5 ರುಚಿಕರ ಸಿಹಿ ತಿನಿಸುಗಳ ರೆಸಿಪಿಗಳು ನಿಮಗಾಗಿ

1. ಕ್ಯಾರೆಟ್ ಹಲ್ವಾ

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್ ತುರಿ – 3 ಕಪ್
ತುಪ್ಪ – 1/4 ಕಪ್
ಸಕ್ಕರೆ -1 ಕಪ್
ಹಾಲು – 3 ಕಪ್
ಡ್ರೈ ಫ್ರೂಟ್ಸ್ – ಸ್ವಲ್ಪ
ಏಲಕ್ಕಿ ಪುಡಿ – ಚಿಟಿಕೆಯಷ್ಟು
Saakshatv cooking recipe preparation of carrot halva
ಮಾಡುವ ವಿಧಾನ
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ, ತುಪ್ಪವನ್ನು ಹಾಕಿ ಕರಗಿಸಿ. ನಂತರ ಡ್ರೈ ಫ್ರೂಟ್ಸ್ ಗಳನ್ನು ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಕ್ಯಾರೆಟ್ ತುರಿ ಸೇರಿಸಿ ಕೆಲವು ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಿ.
ಹಾಲು ಇಂಗುವವರೆಗೆ ಕ್ಯಾರೆಟ್ ತುರಿಯನ್ನು ಬೇಯಿಸಿ ಕೊಳ್ಳಿ. ನಂತರ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ಕರಗಿದ ಬಳಿಕ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣ ತಳ ಬಿಡುವವರೆಗೂ ಕೈಯಾಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.

 

2. ಅನಾನಸ್ ಕೇಸರಿ ಬಾತ್

ಬೇಕಾಗುವ ಸಾಮಗ್ರಿಗಳು

ರವೆ – 1 ಕಪ್
ಚಿಕ್ಕದಾಗಿ ಹೆಚ್ಚಿದ ಅನಾನಸ್ – 1ಕಪ್
ತುಪ್ಪ – 1ಕಪ್
ಗೋಡಂಬಿ, ದ್ರಾಕ್ಷಿ ಸ್ವಲ್ಪ
ಏಲಕ್ಕಿ – 1
ಕೇಸರಿ ಬಣ್ಣ ಚಿಟಿಕೆಯಷ್ಟು
ಲವಂಗ – 2
pineapple kesari bath
ಮಾಡುವ ವಿಧಾನ

ಮೊದಲಿಗೆ ಬಾಣಲೆ ಬಿಸಿ ಮಾಡಿ 1 ಚಮಚ ತುಪ್ಪವನ್ನು ಕಾಯಿಸಿ. ನಂತರ ದ್ರಾಕ್ಷಿ ಗೋಡಂಬಿ, ಲವಂಗ ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ.
ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಸೇರಿಸಿ ಬಿಸಿ‌ ಮಾಡಿ. ನಂತರ ರವೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಿರಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಅನಾನಸ್ ಹೋಳುಗಳನ್ನು ಸೇರಿಸಿ ಐದು ನಿಮಿಷ ಕೈಯಾಡಿಸಿ. ನಂತರ ಸ್ವಲ್ಪ ಸ್ವಲ್ಪವೇ ಬಿಸಿನೀರನ್ನು ಸೇರಿಸಿ. ರವೆ ಬೆಂದ ಬಳಿಕ ಏಲಕ್ಕಿಪುಡಿ, ಕೇಸರಿ ಬಣ್ಣ, ಸಕ್ಕರೆ ಸೇರಿಸಿ 3 ನಿಮಿಷ ಹುರಿದು ಕೆಳಗಿಳಿಸಿ. ಈಗ ಮೊದಲೇ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಕಿ ಅಲಂಕರಿಸಿ.ರುಚಿಯಾದ ಅನಾನಸ್ ಕೇಸರಿ ಬಾತ್ ಸವಿಯಲು ಸಿದ್ಧವಾಗಿದೆ.

 

3. ಗೋಧಿ ಹಲ್ವಾ

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು‌ – 1 ಕಪ್
ತುಪ್ಪ – 1 ಕಪ್
ಸಕ್ಕರೆ – 1 ಕಪ್
ಹಾಲು – 1 ಕಪ್
ನೀರು – ಅಗತ್ಯವಿರುವಷ್ಟು
ಏಲಕ್ಕಿ- 1
ದ್ರಾಕ್ಷಿ, ಗೋಡಂಬಿ – ಸ್ವಲ್ಪ
Saakshatv cooking recipe how to prepare godhi halwa

ಮಾಡುವ ವಿಧಾನ:

ಮೊದಲು ಬಾಣಲೆ ಬಿಸಿ ಮಾಡಿ ತುಪ್ಪ ಹಾಕಿ ಕಾಯಿಸಿ. ನಂತರ ಅದಕ್ಕೆ ಗೋಧಿ ಹಿಟ್ಟನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಗೋಧಿ ಹಿಟ್ಟು ಕಂದು ಬಣ್ಣಕ್ಕೆ ತಿರುಗಿದಾಗ ಸಕ್ಕರೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ಹಾಲನ್ನು ನಿಧಾನಕ್ಕೆ ಮಿಶ್ರ ಮಾಡುತ್ತಾ ಹಾಕಿ. ನಂತರ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ , ಚೆನ್ನಾಗಿ ಬೆರೆಸಿ.
ಬಾಣಲೆಯಲ್ಲಿ ಗೋಧಿ ಮಿಶ್ರಣ ತಳ ಬಿಟ್ಟಾಗ ಅದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಮತ್ತು ಏಲಕ್ಕಿ ಸೇರಿಸಿ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ. ಈಗ ರುಚಿಯಾದ ಗೋಧಿ ಹಲ್ವಾ ಸವಿಯಲು ಸಿದ್ಧ.

 

4. ಗೋಧಿ ‌ಬರ್ಫಿ

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು – 1 ಕಪ್
ತುಪ್ಪ – 1/2 ಕಪ್
ಬೆಲ್ಲದ ಹುಡಿ – 1 ಕಪ್

ಮಾಡುವ ವಿಧಾನ
Saakshatv cooking tips how to prepare godhi barpi
ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಕರಗಿದ ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪವೇ ಗೋಧಿ ಹಿಟ್ಟನ್ನು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಗೋಧಿ ಹಿಟ್ಟನ್ನು ಪರಿಮಳ ಬರುವವರೆಗೆ ಹುರಿಯುತ್ತಾ ಇರಿ. ನಂತರ ಇದಕ್ಕೆ ಬೆಲ್ಲದ ಹುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

ಈ ಮಿಶ್ರಣ ಬಾಣಲೆಯ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಬಳಿಕ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

 

4. ಬಾದಾಮಿ – ಗೇರು ಬೀಜ ಚಿಕ್ಕಿ

ಬೇಕಾಗುವ ಸಾಮಗ್ರಿಗಳು

ಬೆಣ್ಣೆ – 2 ದೊಡ್ಡ ಚಮಚ
ಸಕ್ಕರೆ – 1 ಕಪ್
ಬಾದಾಮಿ – 1/2 ಕಪ್
ಗೇರು ಬೀಜ – 1/2 ಕಪ್
ಒಣಗಿಸಿದ ಗುಲಾಬಿ ಎಸಳು -1 ಕಪ್
ಚಿಟಿಕೆಯಷ್ಟು ಉಪ್ಪು

ಮಾಡುವ ವಿಧಾನ

Saakshatv cooking recipe badam

ಮೊದಲನೆಯದಾಗಿ, ಬಾಣಲೆಯಲ್ಲಿ ಕತ್ತರಿಸಿದ ಬಾದಾಮಿ, ಗೋಡಂಬಿ ತೆಗೆದುಕೊಂಡು ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಿ ಪಕ್ಕದಲ್ಲಿ ಇರಿಸಿ.
ನಂತರ ದಪ್ಪತಳದ ಪಾತ್ರೆಯೊಂದರಲ್ಲಿ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ , ಚಿಟಿಕೆ ಉಪ್ಪನ್ನು ಸೇರಿಸಿ. ಸಕ್ಕರೆ ಕರಗುವವರೆಗೆ ಚೆನ್ನಾಗಿ ಬೆರೆಸಿ.

ಸಕ್ಕರೆ ಬಣ್ಣ ತಿಳಿ ಕಂದು ಬರುವವರಗೆ ಚೆನ್ನಾಗಿ ಬೆರೆಸಿ ನಂತರ ಗ್ಯಾಸ್ ಆಫ್ ಮಾಡಿ.ಬಳಿಕ ಇದಕ್ಕೆ ಬಾದಾಮಿ, ಗೋಡಂಬಿ ಡ್ರೈ ರೋಸ್ಟ್ ಹಾಗೂ ಒಣಗಿದ ಗುಲಾಬಿ ಎಸಳು ಹಾಕಿ ಚೆನ್ನಾಗಿ ಕಲಸಿ. ನಂತರ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ . ಬಿಸಿ ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd