Cooking : ತುಂಬಾ ಸಿಂಪಲ್ ಆಗಿ 10 ನಿಮಿಷದಲ್ಲಿ ಮಾಡಿ ಬೇಳೆ ಸಾರು..!!!
ಕೆಲವೊಮ್ಮೆ ಚಟ್ ಪಟ್ ಅಂತ ಏನಾದ್ರೂ ಸಾರು ಮಾಡಿ ತಿಂದ್ರೆ ಸಾಕು ಎನ್ಸುತ್ತೆ.. ಅಂತ ಸಮಯದಲ್ಲಿ ಬೇಳೆ ಸಾರು ಬೆಸ್ಟ್ ಆಪ್ಷನ್..
ಬೇಳೆ ಸಾರು ನಾನಾ ವಿಧಾನಗಳಲ್ಲಿ ಮಾಡಬಹುದು.. ಆದ್ರಿಲ್ಲಿ ಅತಿ ಸರಳ ವಿಧಾನದಲ್ಲಿ ಹೇಗೆ ರುಚಿಯಾಗಿ ಬೇಳೆ ಸಾರು ಮಾಡಬಹುದು ಎಂಬುದನ್ನ ತಿಳಿಯೋಣ…
ಬೇಕಾಗುವ ಪದಾರ್ಥಗಳು
ತೊಗರಿ ಬೇಳೆ / ಹೆಸರುಬೇಳೆ
ಈರುಳ್ಳಿ – 2
ಎಣ್ಣೆ
ಸಾಸಿವೆ
ಅರಿಶಿಣ
ಟಮೋಟೋ
ಕರಿಬೇವು
ಕೊತ್ತಂಬರಿ ಸೊಪ್ಪು
ಉಪ್ಪು
ಜೀರಿಗೆ
ಹಸಿ ಮೆಣಸಿನ ಕಾಯಿ , ಒಣ ಮೆಣಸಿನ ಕಾಯಿ
ಮಾಡುವ ವಿಧಾನ : ಒಂದು ಕುಕ್ಕರಿಗೆ 1 ಕಪ್ ಬೇಳೆ , ಮಧ್ಯಮ ಗಾತ್ರದಲ್ಲಿ ಹೆಚ್ಚಿದ 3 – 4 ಟಮೋಟೋ , ಮಧ್ಯಮ ಗಾತ್ರದಲ್ಲಿ ಹೆಚ್ಚಿಟ್ಟುಕೊಂಡ ಒಂದು ಈರುಳ್ಳಿ , 1 ರಿಂದ 1 ವರೆ ದೊಡ್ಡ ಚಂಬಿನ ತುಂಬ ನೀರು ಹಾಕಿಕೊಳ್ಳಿ.. ಅದಕ್ಕೆ ಒಂದು ಸ್ಪೂನ್ ಎಣ್ಣೆ , ಅರಿಶಿಣ ಉಪ್ಪು , 3 -4 ಹಸಿರುಮೆಣಸಿನ ಕಾಯಿ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಸಿಲ್ ಬರಿಸಿ.. ತಣ್ಣಗಾದ ನಂತರ ತೆಗೆದು ಪಾತ್ರೆಗೆ ವರ್ಗಯಿಸಿ ಮಸೆಯಿರಿ ಅಥವ ಒಂದ್ ಗ್ರೌಂಡ್ ಗ್ರೈಂಡ್ ಮಾಡಿ.. ನಂತರ ನಿಮಗೆ ಬೇಕಾದ ಹದಕ್ಕೆ ನೀರು ಹಾಕಿ ಚನ್ನಾಗಿ ಕುದಿಸಿ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.. ನಂತರ ಒಗ್ಗರಣೆ ಕೊಡಿ..
ಒಗ್ಗರಣೆಗೆ 3 ಟೀ ಸ್ಪೂನ್ ಎಣ್ಣೆ , ಸಾಸಿವೆ , ಜೀರಿಗೆ , ಅರಿಶಿಣ , ಚೆಚ್ಚಿದ ಬೆಳ್ಳುಳ್ಳಿ , ಕರಿಬೇವು , ಈರುಳ್ಳಿ ಹಾಕಿಕೊಳ್ಳಿ… ನಂತರ ಒಗ್ಗರಣೆ ಕೊಟ್ಟ ಮೇಲೆ ಹೆಚ್ಚಿದ ಕೊತ್ತಂಬರಿ ಹಾಕಿ ಮತ್ತೆ ಒಂದು ನಿಮಿಷ ಕುದಿಸಿ…