Cooking : 3 ವಿಧದ ಟೇಸ್ಟಿ ಮತ್ತು ಆರೋಗ್ಯಕರ ರಿಫ್ರೆಶಿಂಗ್ ಜ್ಯೂಸ್ ಗಳ ರೆಸಿಪಿಗಳು..!!
ಕಲ್ಲಂಗಡಿ ಹಣ್ಣಿನ ಜ್ಯೂಸ್ ( Water Melon Juice – sugar less)
ಪದಾರ್ಥಗಳು
ಕಲ್ಲಂಗಡಿ ಹಣ್ಣು
ಪೆಪ್ಪರ್ ಸಾಲ್ಟ್ / ಉಪ್ಪು , ಕಾಳು ಮೆಣಸಿನ ಪುಡಿ
ಮಾಡುವ ವಿಧಾನ :
ಕಲ್ಲಂಗಡಿ ಹಣ್ಣಿನ ಜ್ಯೂಸ್… ಫ್ಯಾಟ್ ಬರ್ನರ್.. ಹಾಗೂ ಒಳ್ಳೆಯ ರಿಫ್ರೆಶ್ ಮೆಂಟ್ ಡ್ರಿಂಕ್ ಕೂಡ… ಬೇಸಿಗೆಯ ಬಿರು ಬಿಸಿಲಿಗೆ ದಣಿವಾರಿಸುವ ಉತ್ತಮ ಆಯ್ಕೆ.. ಕೆಲವರು ಡಯೇಟ್ ಪ್ಲಾನ್ ನಲ್ಲಿರುವವರು ಶುಗರ್ ಲೆಸ್ ಕುಡಿಯಬೇಕೆಂದುಕೊಳ್ಳುವರು.. ಕೆಲವರಿಗೆ ಸಿಹಿ ರುಚಿ ಹಿಡಿಸುವುದಿಲ್ಲ.. ಅಂತವರು ಸಕ್ಕರೆಯ ಬದಲಾಗಿ ಪೆಪ್ಪರ್ ಸಾಲ್ಟ್ ಹಾಕಿ ಜ್ಯೂಸ್ ಕುಡಿಯಬಹುದು.. ಸಕ್ಕರೆಗಿಂತಲೂ ಇದರ ರುಚಿ ವಿಭಿನ್ನ ಹಾಗೂ ಉತ್ತಮವಾಗಿರುತ್ತದೆ.. ಆರೋಗ್ಯಕ್ಕೂ ಒಳ್ಲೆಯದು.
ಕಲ್ಲಂಗಡಿ ಹಣ್ಣು ಒಂದು ಮಧ್ಯಮ ಗಾತ್ರದ ಹೋಳನ್ನ ಸಿಪ್ಪಿಯಿಂದ ಬೇರ್ಪಡಿಸಿ ದೊಡ್ಡ ದೊಡ್ಡ ಪೀಸ್ ಗಳಾಗಿ ಕತ್ತರಿಸಿ ಜ್ಯೂಸ್ ಮೇಕರ್ ಹಾಕಿಕೊಳ್ಳಿ… ಅದಕ್ಕೆ ನೀರು ಬೇಕಿದ್ದಲ್ಲಿ ಮಾತ್ರ.. ಕಲ್ಲಂಗಡಿ ನೀರಿನ ಹಣ್ಣಾದರಿಂದ ನೀರು ಬೇಕಾಗುವುದಿಲ್ಲ.. ಹಣ್ಣಿನಲ್ಲೇ ನೀರು ಹೆಚ್ಚಾಗಿರುತ್ತದೆ..
ಹಣ್ಣು ಜ್ಯೂಸ್ ಮೇಕರ್ ಗೆ ಹಾಕಿದ ನಂತರ ಅದಕ್ಕೆ ಪೆಪ್ಪರ್ ಸಾಲ್ಟ್ , ಇಲ್ಲವೆಂದರೆ ಉಪ್ಪು ಸ್ವಲ್ಪ , ಹಾಗೆಯೇ ಕಾಳು ಮೆಣಸು ಪುಡಿ ನಿಮ್ಮ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ.. ಐಸ್ ಕ್ಯೂಬ್ಸ್ ಗಳನ್ನ ಬೇಕಿದ್ದರಷ್ಟೇ ಹಾಕಿ ನಂತರ ರುಬ್ಬಿ ಲೋಟಕ್ಕೆ ಹಾಕಿಕೊಂಡ ನಂತರ , ಬೇಕಿದ್ದಲ್ಲಿ ಪುದೀನಾ ಸೇರಿಸಿ , ನಿಂಬೆ ಹಣ್ಣಿನ ರಸವನ್ನ ಬೇಕಿದ್ದರೂ ಸೇರಿಸಿ, ಮತ್ತಷ್ಟು ಪೆಪ್ಪರ್ ಸಾಲ್ಟ್ ಕೂಡ ಹಾಕಿ , ಸೇವಿಸಿ..
ಪೈನ್ ಆಪಲ್ ಜ್ಯೂಸ್ ( Pine apple juice – sugar less)
ಪದಾರ್ಥಗಳು
ಅನಾನಸ್ ( Pine apple )
ಪೆಪ್ಪರ್ ಸಾಲ್ಟ್ / ಉಪ್ಪು , ಕಾಳು ಮೆಣಸಿನ ಪುಡಿ
ಮಾಡುವ ವಿಧಾನ :
ಪೈನ್ ಆಪಲ್ ಜ್ಯೂಸ್ … ಫ್ಯಾಟ್ ಬರ್ನರ್.. ಹಾಗೂ ಒಳ್ಳೆಯ ರಿಫ್ರೆಶ್ ಮೆಂಟ್ ಡ್ರಿಂಕ್ ಕೂಡ… ಕೆಲವರು ಡಯೇಟ್ ಪ್ಲಾನ್ ನಲ್ಲಿರುವವರು ಶುಗರ್ ಲೆಸ್ ಕುಡಿಯಬೇಕೆಂದುಕೊಳ್ಳುವರು.. ಕೆಲವರಿಗೆ ಸಿಹಿ ರುಚಿ ಹಿಡಿಸುವುದಿಲ್ಲ.. ಅಂತವರು ಸಕ್ಕರೆಯ ಬದಲಾಗಿ ಪೆಪ್ಪರ್ ಸಾಲ್ಟ್ ಹಾಕಿ ಜ್ಯೂಸ್ ಕುಡಿಯಬಹುದು.. ಸಕ್ಕರೆಗಿಂತಲೂ ಇದರ ರುಚಿ ವಿಭಿನ್ನ ಹಾಗೂ ಉತ್ತಮವಾಗಿರುತ್ತದೆ.. ಆರೋಗ್ಯಕ್ಕೂ ಒಳ್ಲೆಯದು.
ಪೈನ್ ಆಪಲ್ ಸಿಪ್ಪೆ ಬಿಡಿಸಿ ದೊಡ್ಡ ದೊಡ್ಡ ಪೀಸ್ ಗಳಾಗಿ ಕತ್ತರಿಸಿ ಜ್ಯೂಸ್ ಮೇಕರ್ ಹಾಕಿಕೊಳ್ಳಿ… ಅದಕ್ಕೆ ನೀರು ನಿಮಗೆ ಬೇಕಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ..
ಹಣ್ಣು ಜ್ಯೂಸ್ ಮೇಕರ್ ಗೆ ಹಾಕಿದ ನಂತರ ಅದಕ್ಕೆ ಪೆಪ್ಪರ್ ಸಾಲ್ಟ್ , ಇಲ್ಲವೆಂದರೆ ಉಪ್ಪು ಸ್ವಲ್ಪ , ಹಾಗೆಯೇ ಕಾಳು ಮೆಣಸು ಪುಡಿ ನಿಮ್ಮ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ.. ಐಸ್ ಕ್ಯೂಬ್ಸ್ ಗಳನ್ನ ಬೇಕಿದ್ದರಷ್ಟೇ ಹಾಕಿ ನಂತರ ರುಬ್ಬಿ ಲೋಟಕ್ಕೆ ಹಾಕಿಕೊಂಡ ನಂತರ , ಬೇಕಿದ್ದಲ್ಲಿ ಪುದೀನಾ ಸೇರಿಸಿ , ಮತ್ತಷ್ಟು ಪೆಪ್ಪರ್ ಸಾಲ್ಟ್ ಕೂಡ ಹಾಕಿ , ಸೇವಿಸಿ..